ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಘಟನೆ ಮಾಸುವ ಮುನ್ನವೇ ತಮಿಳುನಾಡಿನ ಚೆನ್ನೈನಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಇಬ್ಬರು ಸಹೋದರಿಯರು ಅಂಗಡಿ ಮಾಲೀಕನಿಗೆ ತಮ್ಮ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲು ಅನುಮತಿ ನೀಡಿದ್ದಾರೆ.
ಅಂಗಡಿಯಿಂದ ಕೊಂಡ ವಸ್ತುಗಳಿಗೆ ಹಣ ನೀಡುವ ಬದಲಾಗಿ ಮಕ್ಕಳನ್ನು ಅತ್ಯಾಚಾರ ಮಾಡಲು ಈ ಮಹಿಳೆಯರು ಅನುಮತಿ ನೀಡಿದ ದಾರುಣ ಘಟನೆ ವರದಿಯಾಗಿದೆ.
ಅಂಗಡಿ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಆರೋಪಿ 48 ವರ್ಷದ ಪೆರುಮಾಳ್ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಂಗಡಿಯಲ್ಲಿ ದಾಸ್ತಾನು ಮಾಡಿದ್ದ. ದಾಳಿಯ ವೇಳೆ ಪೊಲೀಸರು ತಂಬಾಕು ಉತ್ಪನ್ನ ಹಾಗೂ ಮೊಬೈಲ್ನ್ನು ವಶಕ್ಕೆ ಪಡೆದಿದ್ದಾರೆ.
ಅಂಗಡಿಯವನ ಮೊಬೈಲ್ ಫೋನ್ ಚೆಕ್ ಮಾಡಿದ ವೇಳೆ ಪೊಲೀಸರು ಶಾಕ್ಗೊಳಗಾಗಿದ್ದಾರೆ. ಈತನ ಮೊಬೈಲ್ ಫೋನ್ನಲ್ಲಿ ಮಕ್ಕಳ ಮೇಲೆ ಅತ್ಯಾಚಾರ ನಡೆಸುತ್ತಿದ್ದ 50ಕ್ಕೂ ಹೆಚ್ಚು ವಿಡಿಯೋಗಳು ದೊರಕಿವೆ. ಮೊದಲು ಪೊಲೀಸರು ಈತ ಇಂಟರ್ನೆಟ್ನಿಂದ ಈ ವಿಡಿಯೋಗಳನ್ನು ಡೌನ್ಲೋಡ್ ಮಾಡಿದ್ದಿರಬಹುದು ಎಂದು ಶಂಕಿಸಿದ್ದರು. ಆದರೆ ಬಳಿಕ ವಿಡಿಯೋದಲ್ಲಿ ಈ ವ್ಯಕ್ತಿಯ ಮುಖವೇ ಕಂಡಿದೆ. ಕೂಡಲೇ ಪೊಲೀಸರು ಪೆರುಮಾಳ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ಈತ ತಾನು 6 ತಿಂಗಳ ಅವಧಿಯಲ್ಲಿ ಐವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರವೆಸಗಿರೋದಾಗಿ ತಪ್ಪೊಪ್ಪಿಕೊಂಡಿದ್ದಾನೆ.
30 ಹಾಗೂ 28 ವರ್ಷ ಪ್ರಾಯದ ಇಬ್ಬರು ಸಹೋದರಿಯರು ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಅನ್ನೋದು ತನಿಖೆಯಲ್ಲಿ ತಿಳಿದುಬಂದಿದೆ. ಹೀಗಾಗಿ ಇವರಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಒಬ್ಬಾಕೆ ಇದೇ ಅಂಗಡಿಯವನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಅಲ್ಲದೇ ತಮ್ಮ ಮಕ್ಕಳನ್ನೂ ಅಂಗಡಿಯವನ ಜೊತೆ ಬಿಟ್ಟಿದ್ದ ಈ ತಾಯಂದಿರು ಅತ್ಯಾಚಾರ ನಡೆಸುವ ವಿಡಿಯೋ ರೆಕಾರ್ಡ್ ಮಾಡಲೂ ಅನುಮತಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಈ ಮಹಿಳೆಯರಿಗೆ ಅಂಗಡಿಯಲ್ಲಿ ಉಚಿತ ಸಾಮಗ್ರಿ ಪಡೆದುಕೊಳ್ಳಲು ಅವಕಾಶ ನೀಡಲಾಗಿತ್ತು. ಈ ಮಕ್ಕಳ ಮೂವರು ಸ್ನೇಹಿತೆಯರೂ ಕೂಡ ಅಂಗಡಿಯವನಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ.