ಗಾಳಿಪಟದ ದಾರಕ್ಕೆ ಸಿಕ್ಕು ಒದ್ದಾಡುತ್ತಿದ್ದ ಕೋಗಿಲೆ ರಕ್ಷಿಸಿದ ಪೊಲೀಸರು…..! 30-08-2021 12:13PM IST / No Comments / Posted In: Latest News, India, Live News ಗಾಳಿಪಟದ ದಾರಕ್ಕೆ ಸಿಕ್ಕು ನೀಲಗಿರಿ ಮರದ ಮೇಲೆ ಒದ್ದಾಡುತ್ತಿದ್ದ ಕೋಗಿಲೆಯನ್ನು ರಕ್ಷಿಸುವ ಮೂಲಕ ಲಕ್ನೋ ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಭಾನುವಾರ ಸಂಜೆ ಸುಮಾರಿಗೆ ಈ ರೀತಿ ಗಾಳಿಪಟದ ದಾರಕ್ಕೆ ಹಕ್ಕಿ ಸಿಲುಕಿದ್ದರ ಬಗ್ಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚಿರಂಜೀವಿ ನಾಥ್ ಸಿನ್ಹಾ ಹೇಳಿದ್ದಾರೆ. ನಾವು ಅಗ್ನಿಶಾಮಕ ದಳ ಹಾಗೂ ಲ್ನೋ ಮೃಗಾಲಯ ಮೀಸಲು ಪೊಲೀಸರ ಸಮೇತ ರಕ್ಷಣಾ ಸ್ಥಳಕ್ಕೆ ಧಾವಿಸಿದೆವು. ಈ ತಂಡವು ಗಾಳಿಪಟದ ದಾರವನ್ನು ಕತ್ತರಿಸುವ ಮೂಲಕ ಕೋಗಿಲೆಯನ್ನು ಬಂಧಮುಕ್ತ ಮಾಡುವಲ್ಲಿ ಯಶಸ್ವಿಯಾಯ್ತು. ಪಕ್ಷಿಗೆ ಗಾಯವಾಗಿದೆ ಹೀಗಾಗಿ ಲಕ್ನೋ ಮೃಗಾಲಯದ ವೈದ್ಯಕೀಯ ತಂಡವು ಪಕ್ಷಿಗೆ ಚಿಕಿತ್ಸೆ ನೀಡಿದೆ ಎಂದು ಹೇಳಿದ್ರು. ವನ್ಯಜೀವಿ ಪ್ರಿಯ ಚಿರಂಜೀವಿ ನಾಥ್ರನ್ನು ಈ ವರ್ಷದ ಆರಂಭದಲ್ಲಿ ಲಕ್ನೋ ಮೃಗಾಲಯದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಿಸಲಾಗಿದೆ. ಇವರು ಲಾಕ್ಡೌನ್ ಸಮಯದಲ್ಲಿ ಬೀದಿ ಬದಿಯ ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಹಾಗೂ ಮೃಗಾಲಯದ ಪ್ರಾಣಿಗಳನ್ನು ದತ್ತು ಪಡೆಯುವಂತೆ ಜನರನ್ನು ಉತ್ತೇಜಿಸುವ ಕಾರ್ಯ ಮಾಡುವ ಮೂಲಕ ಮೆಚ್ಚುಗೆ ಗಳಿಸಿದ್ದಾರೆ.