ಅಮೆರಿಕದ ವ್ಯಕ್ತಿಯೊಬ್ಬ ತಮಾಷೆಗೆ ಮಾಡಿದ ಕೆಲಸ ಈಗ ಜೀವನದ ನೆಮ್ಮದಿ ಕಳೆಯುವಂತೆ ಮಾಡಿದೆ. ತಮಾಷೆಗಾಗಿ ವ್ಯಕ್ತಿ, ಮಗನ ಡಿ ಎನ್ ಎ ಪರೀಕ್ಷೆ ಮಾಡಿಸಿದ್ದಾನೆ. 12 ವರ್ಷದ ಮಗನ ಡಿ ಎನ್ ಎ ವರದಿ ಆತನನ್ನು ದಂಗಾಗಿಸಿದೆ. ತನ್ನ ಮಗ ಅಲ್ಲ ಎಂಬುದು ಗೊತ್ತಾಗಿದೆ.
ಅಮೆರಿಕದ ಉತಾಹ್ ನಿವಾಸಿಗಳಾದ ಡೊನ್ನಾ ಮತ್ತು ವನ್ನರ್ ಜಾನ್ಸನ್, ಇಬ್ಬರು ಮಕ್ಕಳ ಜೊತೆ ಸಂತೋಷವಾಗಿದ್ದರು. ಆದ್ರೆ ಹಿರಿಯ ಮಗ 12 ವರ್ಷದವನಾಗ್ತಿದ್ದಂತೆ, ತಂದೆ ಮಗನ ಡಿ ಎನ್ ಎ ಪರೀಕ್ಷೆ ಮಾಡಿಸಿದ್ದಾನೆ. ಆದ್ರೆ ಐವಿಎಫ್ ಗೊಂದಲದಿಂದಾಗಿ ತನ್ನ ಮಗನಲ್ಲ ಎಂಬುದು ಗೊತ್ತಾಗಿದೆ.
ಡೊನ್ನಾ ಮತ್ತು ಜಾನ್ಸನ್ 2007 ರಲ್ಲಿ ಎರಡನೇ ಮಗುವನ್ನು ಪಡೆಯಲು ಬಯಸಿದ್ದರು. ಹಾಗಾಗಿ ಐವಿಎಫ್ ಮೊರೆ ಹೋಗಿದ್ದರು. ಡೋನಾ ಐವಿಎಫ್ ಮೂಲಕ ಗರ್ಭಿಣಿಯಾಗಿದ್ದಳು. 12 ವರ್ಷದ ನಂತ್ರ ಡಿ ಎನ್ ಎ ಗೆ ಪರೀಕ್ಷೆ ನಡೆಸಿದಾಗ ಕ್ಲಿನಿಕ್ ನಲ್ಲಾದ ತಪ್ಪು ಗೊತ್ತಾಗಿದೆ. ಕ್ಲಿನಿಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಆಸ್ಪತ್ರೆಯವರು ತಾಯಿ ಕಾಲಂನಲ್ಲಿ ಡೋನಾ ಎಂದು ಬರೆದಿದ್ದು, ತಂದೆ ಹೆಸರಿನಲ್ಲಿ ಅಪರಿಚಿತ ಎಂದು ಬರೆಯಲಾಗಿದೆ. ಇದನ್ನು ನೋಡಿ ದಂಪತಿ ಬೆಚ್ಚಿಬಿದ್ದಿದ್ದಾರೆ. ಇದ್ರ ಬಗ್ಗೆ ತನಿಖೆ ನಡೆಯುತ್ತಿದೆ.