ಸೇನಾ ಸಮವಸ್ತ್ರ ಧರಿಸಿ ರಾಷ್ಟ್ರಗೀತೆ ಹಾಡಿದ 5ರ ಪೋರಿ 30-08-2021 11:47AM IST / No Comments / Posted In: Latest News, India, Live News ಮಿಜೋರಾಂ ಮೂಲದ ಐದು ವರ್ಷದ ಬಾಲಕಿ ಎಸ್ತರ್, ಯೋಧರ ಸಮವಸ್ತ್ರ ಧರಿಸಿಕೊಂಡು ರಾಷ್ಟ್ರಗೀತೆ ಹಾಡಿ, ಸೆಲ್ಯೂಟ್ ಮಾಡುತ್ತಿರುವ ಈ ವಿಡಿಯೊ ಭಾರಿ ವೈರಲ್ ಆಗುತ್ತಿದೆ. ಆಕೆಯ ನಿವಾಸವಿರುವ ಲುಂಗ್ಲೀಯಲ್ಲಿ ಸೇನಾ ಪಡೆಯ ಅಸ್ಸಾಂ ರೈಫಲ್ಸ್ ಯೋಧರೊಂದಿಗೆ ಎಸ್ತರ್ ಹಾಡಿದ್ದಾಳೆ. ಈ 2 ನಿಮಿಷಗಳ ವಿಡಿಯೊವನ್ನು ಕಂಡು ಮಿಜೊರಾಂ ಮುಖ್ಯಮಂತ್ರಿ ಕೂಡ ಮೆಚ್ಚುಗೆ ಸೂಚಿಸಿ, ಮುದ್ದಾಗಿದೆ ಎಂದು ಕೊಂಡಾಡಿದ್ದಾರೆ. ನಿವೃತ್ತ ಏರ್ ಮಾರ್ಷಲ್ ಅನಿಲ್ ಚೋಪ್ರಾ ಅವರು ಕೂಡ ಬಾಲಕಿಯ ರಾಷ್ಟ್ರಭಕ್ತಿ, ಆಕೆಯು ಸಲ್ಲಿಸಿದ ಗೌರವಕ್ಕೆ ಫಿದಾ ಆಗಿದ್ದಾರೆ. ಜತೆಗೆ ಸೇನಾ ಬ್ಯಾಂಡ್ ಪಡೆಯು ಆಕೆಯನ್ನು ಸಂಪರ್ಕಿಸಿ, ಮುದ್ದಾದ ಕಂಠದಲ್ಲಿ ರಾಷ್ಟ್ರಗೀತೆಯನ್ನು ಧ್ವನಿಮುದ್ರಣ ಕೂಡ ಮಾಡಿಕೊಂಡಿದೆಯಂತೆ. ಸಾಮಾಜಿಕ ಜಾಲತಾಣಗಳಲ್ಲಿ ಏರುತ್ತಲೇ ಇದೆ ಮೋದಿ ಗ್ರಾಫ್: ಟ್ವಿಟರ್ನಲ್ಲಿ ಏಳು ಕೋಟಿ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ಕಳೆದ ವರ್ಷ ಎಸ್ತರ್ ಹಾಡಿದ್ದ ‘ವಂದೇ ಮಾತರಂ’ ಗೀತೆಯ ವಿಡಿಯೋಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಫಿದಾ ಆಗಿ ಟ್ವಿಟರ್ನಲ್ಲಿ ಮೆಚ್ಚುಗೆ ಸೂಚಿಸಿದ್ದರು. जन गण मंगलदायक जय हे भारत भाग्य विधाता। जय हे, जय हे, जय हे जय जय जय जय हे॥ एस्तेर हनमते का एक और सनसनीखेज प्रदर्शन !#EstherHnamte #IndiaAt75 #NationalAnthem #राष्ट्रगान @adgpi @PMOIndia @HMOIndia 🇮🇳🇮🇳🇮🇳🇮🇳🇮🇳🇮🇳🇮🇳👇🏻👇🏻https://t.co/zBoaQpXms9 pic.twitter.com/3orqoFpnER — Zoramthanga (@ZoramthangaCM) August 15, 2021