ʼಫಿಟ್ ಇಂಡಿಯಾʼ ಆಪ್ ಗೆ ಚಾಲನೆ ನೀಡುವ ವೇಳೆ ಕೇಂದ್ರ ಸಚಿವರ ʼಸ್ಕಿಪ್ಪಿಂಗ್ʼ 30-08-2021 9:01AM IST / No Comments / Posted In: Latest News, India, Live News ಹಾಕಿ ದಂತಕತೆ ಧ್ಯಾನಚಂದ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ‘ಫಿಟ್ ಇಂಡಿಯಾ’ ಆ್ಯಪ್ ಗೆ ಚಾಲನೆ ನೀಡಲಾಯಿತು. ಸಂಕಷ್ಟಕ್ಕೆ ಸಿಲುಕಿದ ಬಿ.ಸಿ.ಸಿ.ಐ. ಅಧ್ಯಕ್ಷ ಆದರೆ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು, ಕೇಂದ್ರ ಕ್ರೀಡಾ ಮತ್ತು ಯುವಜನ ಸೇವೆ ಸಚಿವ ಅನುರಾಗ್ ಠಾಕೂರ್ ಅವರು. ತಮ್ಮ ಫಿಟ್ನೆಸ್ ಲೆವೆಲ್ ಪ್ರದರ್ಶಿಸಲು ಸ್ಕಿಪ್ಪಿಂಗ್ ಆಡಿ, ನೆರೆದಿದ್ದವರ ಹುಬ್ಬೇರುವಂತೆ ಮಾಡಿದರು. ಈ ವಿಡಿಯೊವನ್ನು ಅವರು ಟ್ವಿಟರ್ ಖಾತೆಯಲ್ಲಿ ಕೂಡ ಹಂಚಿಕೊಂಡು, ನಿಮ್ಮ ಫಿಟ್ನೆಸ್ ಲೆವೆಲ್ ಎಷ್ಟು ಎಂದು ಜನರಿಗೆ ಪ್ರಶ್ನೆ ಕೂಡ ಹಾಕಿದ್ದಾರೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಅಭಿಯಾನಕ್ಕೆ ಚಾಲನೆ ನೀಡಿದ್ದರು. #WATCH | Union Sports Minister Anurag Thakur jumps a skipping rope during the launch of FIT INDIA mobile application in Delhi pic.twitter.com/alRpEMAIT2 — ANI (@ANI) August 29, 2021