alex Certify ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ

ಕೋವಿಡ್-19 ಸೋಂಕಿಗೆ ನೀಡಲಾಗುವ ಕೋವ್ಯಾಕ್ಸ್ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ಮಾಡಲು ಸ್ವಯಂಸೇವಕರ ನೇಮಕಾತಿ ಆರಂಭಿಸಲಾಗಿದೆ.

2-17 ವರ್ಷಗಳ ವಯಸ್ಸಿನ ಮಕ್ಕಳಿಗೆ ನೀಡಲಾಗುವ ಈ ಲಸಿಕೆಯ ಪ್ರಯೋಗ ನಡೆಸಲು ಲಸಿಕೆಯ ಉತ್ಪಾದಕ ಸೀರಮ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾದ ಭಾರತೀಯ ಮದ್ದು ನಿಯಂತ್ರಣ ಪ್ರಾಧಿಕಾರವು ಕಳೆದ ಜುಲೈನಲ್ಲಿ ಅನುಮತಿ ಕೊಟ್ಟಿದೆ.

ಹಮ್‌ದರ್ದ್ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ವಿವಿಯಲ್ಲಿ 2ನೇ ಹಂತದ ಈ ವೈದ್ಯಕೀಯ ಪ್ರಯೋಗ ಆರಂಭಗೊಂಡಿದೆ. 10 ಜಾಗಗಳಲ್ಲಿ ಈ ಪ್ರಯೋಗ ಜರುಗಲಿದ್ದು, 920ಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಕೊರೊನಾ ಲಸಿಕೆಯಲ್ಲಿ ಹೊಸ ದಾಖಲೆ….! ಒಂದೇ ದಿನ 90 ಲಕ್ಷಕ್ಕೂ ಹೆಚ್ಚು ಲಸಿಕೆ ಹಾಕಿದ ಭಾರತ

ದೇಶೀಯವಾಗಿ ಜ಼ೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಸೂಜಿ-ರಹಿತ ಕೋವಿಡ್ ಲಸಿಕೆ ಜ಼ೈಕೋವ್‌-ಡಿಗೆ ಅದಾಗಲೇ ತುರ್ತ ಪರಿಸ್ಥಿತಿಯಲ್ಲಿ ಬಳಸಲು ಅನುಮತಿ ನೀಡಲಾಗಿದೆ. 12-18 ವರ್ಷ ವಯಸ್ಸಿನ ಮಂದಿಯಲ್ಲಿ ನೀಡಲಾದ ದೇಶದ ಮೊದಲ ಲಸಿಕೆ ಇದಾಗಿದೆ.

ಜಗತ್ತಿನಾದ್ಯಂತ 18 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ಕೊಟ್ಟು ಮುಗಿಸಿದ ಕೂಡಲೇ ಮಕ್ಕಳಿಗೆ ಕೋವಿಡ್ ಲಸಿಕೆ ಹಾಕುವ ಅಭಿಯಾನಕ್ಕೆ ಚುರುಕು ನೀಡಲು ಸಿದ್ಧತೆಗಳು ಭರದಿಂದ ಸಾಗಿವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...