alex Certify ಕಟ್ಟಡದ ಮೇಲೆ ವಿಡಿಯೋ ಗೇಮ್‌ ನ ಬೃಹತ್‌ ಪ್ರದರ್ಶನದಿಂದ ಗಿನ್ನಿಸ್‌ ದಾಖಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಡದ ಮೇಲೆ ವಿಡಿಯೋ ಗೇಮ್‌ ನ ಬೃಹತ್‌ ಪ್ರದರ್ಶನದಿಂದ ಗಿನ್ನಿಸ್‌ ದಾಖಲೆ

ಆನ್ಲೈನ್ ವಿಡಿಯೋ ಗೇಮ್ ಗರೇನಾ ಫ್ರೀ ಫೈರ್‌ನ ತಯಾರಕರು ಈ ಗೇಮ್‌ ಅನ್ನು ಲಾಸ್‌ ವೆಗಾಸ್‌ನ ಜನಪ್ರಿಯ ಕಟ್ಟಡವೊಂದರ ಮೇಲೆ ಪ್ರೊಜೆಕ್ಟ್‌ ಮಾಡಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿದ್ದಾರೆ.

ಗೇಮ್‌ನ ನಾಲ್ಕನೇ ವರ್ಷಾಚರಣೆಯನ್ನು ಹೀಗೆ ಟ್ರೋಪಿಕಾನಾ ಹೊಟೇಲ್‌ನ ಕ್ಲಬ್‌ ಟವರ್‌ ಮೇಲೆ ಪ್ರೊಜೆಕ್ಟ್ ಮಾಡಿದ್ದಾರೆ ಅದರ ತಯಾರಕರು. ಈ ಬೃಹತ್‌ ಪ್ರೊಜೆಕ್ಷನ್‌ ಅನ್ನು 46,733 ಚದರ ಅಡಿ ಕಟ್ಟಡದ ಮೇಲೆ ಮಾಡಲಾಗಿದೆ.

ಈ ರಮಣೀಯ ಪ್ರದರ್ಶನಕ್ಕೆ 52 ಪ್ರೊಜೆಕ್ಟರ್‌ಗಳನ್ನು ಬಳಸಲಾಗಿದ್ದು, 10 ಮೀಡಿಯಾ ಸರ್ವರ್‌ಗಳನ್ನು ಸಹ ಉಪಯೋಗಿಸಲಾಗಿದೆ. 1.6 ದಶಲಕ್ಷ ಲುಮೆನ್ಸ್‌ ಬೆಳಕನ್ನು ಪ್ರದರ್ಶನದ ಮೇಲೆ ಚೆಲ್ಲಲಾಗಿದ್ದು, ಪ್ರೊಜೆಕ್ಟರ್‌ ಅರ‍್ರೆಯ ಮೇಲೆ ಚೆಲ್ಲಲಾದ ಅತಿ ಪ್ರಕಾಶಮಾನ ಬೆಳಕು ಎಂಬ ದಾಖಲೆಗೆ ಪಾತ್ರವಾಗಿದೆ.

ಈ ಹಿಂದೆ ಎಕ್ಸ್‌ಬಾಕ್‌ ಮತ್ತು ಡೆಸ್ಟಿನಿ 2: ಬಿಯಾಂಡ್‌ ಲೈಟ್‌ ಗೇಮ್‌ ತಯಾರಕರು ಕಳೆದ ಡಿಸೆಂಬರ್‌ನಲ್ಲಿ 19,090 ಚದರ ಅಡಿ ವಿಸ್ತಾರದಲ್ಲಿ ಪ್ರೊಜೆಕ್ಟ್ ಮಾಡುವ ಮೂಲಕ ನಿರ್ಮಿಸಿದ್ದ ದಾಖಲೆಯನ್ನು ಈ ಪ್ರೊಜೆಕ್ಷನ್ ಮುರಿದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...