alex Certify ರುಚಿಯಾದ ಸೇಬುಹಣ್ಣಿನ ಹಲ್ವಾ ಸವಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಯಾದ ಸೇಬುಹಣ್ಣಿನ ಹಲ್ವಾ ಸವಿಯಿರಿ

ಬೇಕಾಗುವ ಸಾಮಾಗ್ರಿಗಳು:

ಸೇಬುಹಣ್ಣು – 3, ಸಕ್ಕರೆ – 1/4 ಕಪ್, ತುಪ್ಪ- ಸ್ವಲ್ಪ, ಏಲಕ್ಕಿ- ಅರ್ಧ ಟೀ ಸ್ಪೂನ್, ದ್ರಾಕ್ಷಿ, ಗೋಡಂಬಿ.

ಮಾಡುವ ವಿಧಾನ:

ಸೇಬುಹಣ್ಣನ್ನು ಕಟ್ ಮಾಡಿಕೊಂಡು ಅದರ ಬೀಜ ತೆಗೆದು ಸಣ್ಣಗೆ ತುರಿಯಿರಿ. ನಂತರ ಒಂದು ಬಾಣಲೆಗೆ 2 ಟೀ ಸ್ಪೂನ್ ತುಪ್ಪ ಹಾಕಿ ತುರಿದ ಸೇಬುಹಣ್ಣನ್ನು ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. 5 ನಿಮಿಷ ಚೆನ್ನಾಗಿ ಮಗುಚಿದ ನಂತರ ಕೇಸರಿದಳ ಹಾಕಿ.

ನಂತರ ಕಾಲು ಕಪ್ ನಷ್ಟು ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಏಲಕ್ಕಿ ಪುಡಿ, ಹುರಿದ ದ್ರಾಕ್ಷಿ, ಗೋಡಂಬಿ ಸೇರಿಸಿದರೆ ಸವಿಯಲು ರುಚಿಯಾದ ಸೇಬುಹಣ್ಣಿನ ಹಲ್ವಾ ರೆಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...