alex Certify ಮದುವೆಯಾಗಲು ಆರು ಅಡಿಗಿಂತ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಸೂಚಿಸಿದ್ದಕ್ಕೆ ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿದ ಯುವತಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾಗಲು ಆರು ಅಡಿಗಿಂತ ಕಡಿಮೆ ಎತ್ತರವಿರುವ ವ್ಯಕ್ತಿಯನ್ನು ಸೂಚಿಸಿದ್ದಕ್ಕೆ ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿದ ಯುವತಿ..!

ಮೆಲ್ಬೋರ್ನ್: ಆರು ಅಡಿಗಿಂತ ಕಡಿಮೆ ಇರುವ ಎತ್ತರವಿರುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗದ ಕಾರಣ ಯುವತಿಯೊಬ್ಬಳು ಡೇಟಿಂಗ್ ಏಜೆನ್ಸಿ ವಿರುದ್ಧ ಮೊಕದ್ದಮೆ ಹೂಡಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಮದುವೆಯಾಗಲು ಲೈಫ್ ಪಾರ್ಟ್ನರ್ ನನ್ನು ಹುಡುಕುತ್ತಿದ್ದ ಆಸ್ಟ್ರೇಲಿಯಾದ 36 ವರ್ಷದ ಯುವತಿ ಐಲಿನ್ ಮೂರ್ ವೃತ್ತಿಯಲ್ಲಿ ವೈದ್ಯೆಯಾಗಿದ್ದಾರೆ. ಡೇಟಿಂಗ್ ಏಜೆನ್ಸಿ ಮೊರೆ ಹೋಗಿದ್ದ ಈಕೆಗೆ ಎತ್ತರವೇ ಪ್ರಮುಖ ಮಾನದಂಡವಾಗಿತ್ತಂತೆ.

ರೋಮನ್ ಕ್ಯಾಥೋಲಿಕ್ ಕುಟುಂಬದಲ್ಲಿ ಹುಟ್ಟಿದ ಈಕೆ ಆರು ಅಡಿಗಳಿಗಿಂತಲೂ ಉದ್ದವಾಗಿದ್ದಾಳೆ. ಮೊದಲಿಗೆ ಏಜೆನ್ಸಿ ಹುಡುಕಿದ ವ್ಯಕ್ತಿ ಡೇವಿ ವಿದೇಶದಲ್ಲಿದ್ದಾನೆ ಎಂಬುದಾಗಿ ಹೇಳಿದ್ದರು. ನಂತರದಲ್ಲಿ ಜೋಡಿಯು ಒಂದೇ ಎತ್ತರ ಹೊಂದಿರುವುದಾಗಿ ಹೇಳಿದೆ.

SHOCKING NEWS: ಶೌಚಾಲಯದಲ್ಲಿ ನೇಣಿಗೆ ಶರಣಾದ ಅತ್ಯಾಚಾರ ಆರೋಪಿ

ತಾನು ಮದುವೆಯಾಗಲು ಮತ್ತು ಕುಟುಂಬವನ್ನು ಪ್ರಾರಂಭಿಸಲು ಸಿದ್ಧವಾಗಿದ್ದ ಹಂತದಲ್ಲಿದ್ದೆ. ವಯಸ್ಸು 36 ಆಗಿದ್ದು, ಜೀವನದ ಮುಂದಿನ ಅಧ್ಯಾಯವನ್ನು ಆರಂಭಿಸಲು ಸಿದ್ಧಳಾಗಿದ್ದೆ ಎಂದು ಹೇಳಿರುವ ಡಾ. ಐಲಿನ್, ಆರು ಅಡಿಗಿಂತಲೂ ಎತ್ತರವಿರುವ ಪಾಲುದಾರನನ್ನು ಹುಡುಕುತ್ತಿದ್ದರಂತೆ. ತನ್ನ ಈ ನಿಬಂಧನೆಯನ್ನು ಏಜೆನ್ಸಿಗೆ ಹೇಳಿಕೊಂಡಿದ್ದಳು.

ಆದರೀಗ ವ್ಯಕ್ತಿಯ ಎತ್ತರ ಒಂದೇ ಆಗಿದೆ ಎಂಬುವುದನ್ನು ತಡವಾಗಿ ಹೇಳಿದ ಏಜೆನ್ಸಿ ವಿರುದ್ಧ ಯುವತಿ ಸಿಡಿಮಿಡಿಗೊಂಡಿದ್ದಾಳೆ. ಹೀಗಾಗಿ $4995 ಪರಿಹಾರ ಮೊತ್ತ ನೀಡಬೇಕು ಹಾಗೂ ಉನ್ನತ ಮಟ್ಟದ ಡೇಟಿಂಗ್ ಏಜೆನ್ಸಿ ಎಲೈಟ್ ಇಂಟ್ರಡಕ್ಷನ್ ನಿಂದ ಕ್ಷಮೆಯಾಚನೆ ಪತ್ರ ನೀಡಬೇಕೆಂದು ಮೊಕದ್ದಮೆ ಹೂಡಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...