alex Certify ಹಬ್ಬದ ಋತುವಿನಲ್ಲಿ ಪ್ರಯಾಣದ ಸಿದ್ಧತೆ ನಡೆಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬದ ಋತುವಿನಲ್ಲಿ ಪ್ರಯಾಣದ ಸಿದ್ಧತೆ ನಡೆಸುತ್ತಿದ್ದೀರಾ…? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

Planning travel for festive season? Check full list of states requiring Covid report, vaccination status

ಶ್ರಾವಣ, ಭಾದ್ರಪದ ಮಾಸಗಳ ಈ ಹಬ್ಬದ ಋತುವಿನಲ್ಲಿ ಸಂಬಂಧಿಕರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿರುವವರೇ ಅಧಿಕ. ಈಗಾಗಲೇ ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದು ತಲೆಕೆಟ್ಟಂತೆ ಆಗಿದೆ ಎಂದು ಬಹುತೇಕ ಮಂದಿ ಹೊರಗೆ ತಿರುಗಾಡುವುದು ಹೆಚ್ಚುತ್ತಿದೆ. ಹಾಗಿದ್ದಲ್ಲಿ ಯಾವ ರಾಜ್ಯದ ಭೇಟಿಗೆ ಕೊರೊನಾ ಟೆಸ್ಟ್, ಕೊರೊನಾ ತಡೆ ಲಸಿಕೆಯ ಪ್ರಮಾಣಪತ್ರ ಕಡ್ಡಾಯ ಎನ್ನುವುದನ್ನು ತಿಳಿಯಿರಿ.

ಕರ್ನಾಟಕದಲ್ಲೇ ಪ್ರವಾಸಕ್ಕೆ ಸದ್ಯದ ಮಟ್ಟಿಗೆ ಈ ದಾಖಲೆಗಳ ಅಗತ್ಯವಿಲ್ಲ. ಆದರೆ ವೈಯಕ್ತಿಕ ಸುರಕ್ಷತೆ ದೃಷ್ಟಿಯಿಂದ ಕೊರೊನಾ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳುವುದು ಉತ್ತಮ.

ಇನ್ನು ತಮಿಳುನಾಡಿನಲ್ಲಿ ಕಳೆದ 72 ಗಂಟೆಗಳ ಆರ್‍ಟಿ-ಪಿಸಿಆರ್ ಟೆಸ್ಟ್ ವರದಿ ನೆಗೆಟಿವ್ ಇದ್ದರೆ ಮಾತ್ರವೇ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ವಂಚಕರಿಂದ ನಿಮ್ಮ ಹಣ ರಕ್ಷಿಸುವುದು ಹೇಗೆ…? ಬ್ಯಾಂಕ್ ನವರಂತೆ ಕರೆ ಮಾಡುವ ವಂಚಕರ ಬಗ್ಗೆ ಇಲ್ಲಿದೆ ಮಾಹಿತಿ

ಕೇರಳ, ಬ್ರಿಟನ್, ಬ್ರೆಜಿಲ್, ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಬರುವವರಿಗೂ ಇದು ಅನ್ವಯ. ಉಳಿದಂತೆ ಹಿಮಾಚಲ ಪ್ರದೇಶದಲ್ಲಿ ಯಾರೇ ಬಂದರೂ ಎರಡೂ ಡೋಸ್ ಪಡೆದಿರುವ ಪ್ರಮಾಣಪತ್ರ ಅಥವಾ ಕೊರೊನಾ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.

ಅಸ್ಸಾಂ, ಮಹಾರಾಷ್ಟ್ರದಲ್ಲೂ ಇದೇ ನಿಯಮವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಈ ನಿಯಮಗಳ ಜತೆಗೆ ಪ್ರಯಾಣಿಕರು ಒಂದು ವಾರ ಕ್ವಾರಂಟೈನ್‍ಗೆ ಕೂಡ ಒಳಗಾಗಬೇಕಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...