ಚಟಕ್ಕೆ ಬಿದ್ದವನು ಚಟ್ಟ ಹತ್ತುತ್ತಾನೆ ಎಂಬ ಮಾತಿದೆ. ಈ ಚಟ, ಜೈಲಿಗೂ ಕಳಿಸುತ್ತದೆ. ಕೆಲವೊಂದು ಚಟಕ್ಕೆ ಬಿದ್ದವರು ಅದ್ರಿಂದ ಹೊರ ಬರುವುದು ಕಷ್ಟ. ಆರಂಭದಲ್ಲಿಯೇ ಇದ್ರಿಂದ ಹೊರ ಬರಬೇಕು. ಇಲ್ಲವಾದ್ರೆ ಮುಂದೆ ಕಷ್ಟ ಅನುಭವಿಸಬೇಕಾಗುತ್ತದೆ. ಇದಕ್ಕೆ ಡಾಕ್ಯುಮೆಂಟರಿ ಕಂಪನಿಯ ನಿರ್ಮಾಪಕ ಮಾರ್ಕ್ ಜೋಹಾನ್ ಉದಾಹರಣೆ.
ಯುಕೆ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಡಾಕ್ಯುಮೆಂಟರಿ ಕಂಪನಿಯ ನಿರ್ಮಾಪಕ ಮಾರ್ಕ್ ಜೋಹಾನ್ ಗೆ ಕಂಪನಿ 2019ರಲ್ಲಿ ಕ್ರೆಡಿಟ್ ಕಾರ್ಡ್ ನೀಡಿತ್ತು. 55 ವರ್ಷದ ಮಾರ್ಕ್ ಜೋಹನ್, ವಯಸ್ಕರ ಚಿತ್ರ ವೀಕ್ಷಿಸುವ ಚಟ ಅಂಟಿಸಿಕೊಂಡಿದ್ದ. ಅಧಿಕಾರದ ದುರುಪಯೋಗಪಡಿಸಿಕೊಂಡ ಜೋಹನ್, ವಯಸ್ಕರ ಚಿತ್ರ ವೀಕ್ಷಣೆಗೆ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾನೆ. ಕಂಪನಿ ಕ್ರೆಡಿಟ್ ಕಾರ್ಡ್ ಉಜ್ಜಿದ್ದಾನೆ.
ಕಂಪನಿಗೆ ಅನುಮಾನ ಬಂದಿದ್ದು, ಒಂದು ಕೋಟಿಗೆ ಲೆಕ್ಕ ಕೇಳಿದೆ. ಹಾಗೆ 1 ಕೋಟಿ ವಾಪಸ್ ನೀಡುವಂತೆ ಕೇಳಿದೆ. ಜೋಹಾನ್ ಗೆ ಹಣ ನೀಡಲು ಸಾಧ್ಯವಾಗಲಿಲ್ಲ. ಆಗ ಕಂಪನಿ ಕೋರ್ಟ್ ಮೆಟ್ಟಿಲೇರಿದೆ. 2019ರಿಂದ 2020ರವರೆಗೆ ಆತ ಕ್ರೆಡಿಟ್ ಕಾರ್ಡ್ ಉಜ್ಜಿದ್ದು, ಈ ಬಗ್ಗೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಕೋರ್ಟ್ ಮುಂದೆ ಜೋಹಾನ್ ತಪ್ಪೊಪ್ಪಿಕೊಂಡಿದ್ದಾರೆ. ವಿಚಾರಣೆ ನಂತ್ರ ಕೋರ್ಟ್, ಜೋಹಾನ್ ಗೆ 1 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.