ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಘಟನೆ ಬೆನಲ್ಲೇ ಮೈಸೂರು ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಗೆ ನಿರ್ಬಂಧ ವಿಧಿಸಿ ವಿವಾದಿತ ಆದೇಶ ಹೊರಡಿಸಿದ್ದ ವಿವಿ ಇದೀಗ ತನ್ನ ಆದೇಶ ಹಿಂಪಡೆದಿದೆ.
ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಸೂಚನೆ ಮೇರೆಗೆ ವಿಶ್ವವಿದ್ಯಾಲಯ ವಿವಾದಿತ ಆದೇಶ ಹಿಂಪಡೆದಿದ್ದು, ಆದರೆ ಮೈಸೂರಿನ ಕುಕ್ಕರವಳ್ಳಿ ಕೆರೆ ಸುತ್ತ ನಿರ್ಬಂಧ ಮುಂದುವರೆಸಿದೆ.
ಮೈಸೂರು ದುರಂತದ ಬಳಿಕ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿನಿಯರಿಗೆ ಹೊಸ ನಿರ್ಬಂಧ…!
ಪ್ರಕರಣದ ಬಳಿಕ ವಿವಿ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳು ಸಂಜೆ 6:30ರ ಬಳಿಕ ಕುಳಿತುಕೊಳ್ಳಲು, ಓಡಾಡಲು ನಿರ್ಬಂಧ ವಿಧಿಸಲಾಗಿತ್ತು. ವಿವಿ ಆದೇಶ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಇದೀಗ ತನ್ನ ಆದೇಶವನ್ನು ಹಿಂಪಡೆದಿದೆ.