ರಾಜಮೌಳಿ ನಿರ್ದೇಶನದ ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ‘RRR’ ಚಿತ್ರದ ಶೂಟಿಂಗ್ ಅನ್ನು ಪೂರ್ಣಗೊಳಿಸಿದ್ದಾರೆ. ಸುಮಾರು 400 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸಲು ‘ಆರ್ ಆರ್ ಆರ್’ ಚಿತ್ರತಂಡ ಸಜ್ಜಾಗಿದೆ.
ಅತ್ಯಾಚಾರಿಗಳಿಗೆ ಪೊಲೀಸರ ಭಯವಿಲ್ಲ; ಕಾನೂನು ತಿದ್ದುಪಡಿ ಅಗತ್ಯವಿದೆ ಎಂದ ಸಚಿವ ಈಶ್ವರಪ್ಪ
ಈ ಚಿತ್ರವನ್ನು ಡಿ.ವಿ.ವಿ ದಾನಯ್ಯ ತಮ್ಮ ಡಿ.ವಿ.ವಿ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದಾರೆ. ಎಮ್ ಎಮ್ ಕೀರವಾಣಿ ಸಂಗೀತ ನೀಡಿದ್ದಾರೆ. ಅಜಯ್ ದೇವಗನ್, ಆಲಿಯಾ ಭಟ್, ಒಲಿವಿಯಾ ಮೋರಿಸ್, ರಾಯ್ ಸ್ಟೀವನ್ಸನ್, ಛತ್ರಪತಿ ಶೇಖರ್, ಸೇರಿದಂತೆ ಈ ಸಿನಿಮಾದಲ್ಲಿ ಮುಂತಾದ ತಾರಬಳಗವಿದೆ.
2018 ನವೆಂಬರ್ 19 ರಂದು ಶೂಟಿಂಗ್ ಪ್ರಾರಂಭಿಸಿದ್ದ RRR ಚಿತ್ರತಂಡ ಬಹುತೇಕ ಚಿತ್ರೀಕರಣವನ್ನು ಮುಗಿಸಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ.