alex Certify ಕಳ್ಳತನ ಮಾಡಲು ಭದ್ರತಾ ಸಿಬ್ಬಂದಿಯಂತೆ ನಟಿಸಿದ್ದ ಟೆಕ್ಕಿ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ ಮಾಡಲು ಭದ್ರತಾ ಸಿಬ್ಬಂದಿಯಂತೆ ನಟಿಸಿದ್ದ ಟೆಕ್ಕಿ ಅರೆಸ್ಟ್

ಸಿಎಂಆರ್​​ ವಿಶ್ವವಿದ್ಯಾಲಯದಲ್ಲಿನ ಕಂಪ್ಯೂಟರ್​ ಸೇರಿದಂತೆ ವಿವಿಧ ಬೆಲೆ‌ ಬಾಳುವ ಸಾಧನಗಳನ್ನು ಕದಿಯುವ ಉದ್ದೇಶದಿಂದ ಸಾಫ್ಟ್​ವೇರ್ ಇಂಜಿನಿಯರ್​ ಒಬ್ಬ ಭದ್ರತಾ ಸಿಬ್ಬಂದಿಯಂತೆ ನಟಿಸಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಒಡಿಶಾ ಮೂಲದ 27 ವರ್ಷದ ರಾಜ್​ ಪಾತ್ರಾನನ್ನು ಈ ವರ್ಷದ ಲಾಕ್​ಡೌನ್​ ಸಮಯದಲ್ಲಿ ಅಂದರೆ ಮೇ 4 ರಿಂದ ಮೇ 11ರ ಸಮಯದಲ್ಲಿ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್​ ಸಾಧನಗಳನ್ನು ಕಳುವು ಮಾಡಿದ ಆರೋಪದ ಅಡಿಯಲ್ಲಿ ಆಗಸ್ಟ್​ 21ರಂದು ಬಾಗಲೂರು ಠಾಣಾ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪಾತ್ರಾ 2018 ರಿಂದಲೇ ಬೆಂಗಳೂರಿನಲ್ಲಿ ವಾಸವಿದ್ದ ಹಾಗೂ ಈ ಸಮಯದಲ್ಲಿ ಸಾಕಷ್ಟು ಸಾಫ್ಟ್​ವೇರ್​ ಕಂಪನಿಗಳಲ್ಲಿ ಕೆಲಸವನ್ನೂ ಮಾಡಿದ್ದ. ಆದರೆ ಇಲ್ಲಿ ಸಿಗುವ ವೇತನಕ್ಕಿಂತ ಕಳ್ಳತನದಲ್ಲೇ ಹೆಚ್ಚು ಲಾಭವಿದೆ ಎಂದು ಯೋಚಿಸಿ ಪಾತ್ರಾ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಲು ಆರಂಭಿಸಿದ. ಪ್ರತಿ ಬಾರಿ ಕಳ್ಳತನ ಎಸಗಿದ ಬಳಿಕವೂ ಈತ ಅಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದ ಎನ್ನಲಾಗಿದೆ.

ಅದೇ ರೀತಿ ಪಾತ್ರಾ ಏಪ್ರಿಲ್​ ತಿಂಗಳಲ್ಲಿ ಖಾಸಗಿಯಾಗಿ ನಡೆಯುತ್ತಿರುವ ಸಿಎಂಆರ್​ ಯೂನಿವರ್ಸಿಟಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ನೇಮಕಗೊಂಡಿದ್ದ. ಕೆಲಸಕ್ಕೆ ಸೇರಿದ ಬಳಿಕ ಕ್ಯಾಂಪಸ್​ನ ಪ್ರತಿಯೊಂದು ಮೂಲೆ ಮೂಲೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಳ್ಳತನಕ್ಕೆ ಪ್ಲಾನ್​ ಮಾಡಿದ್ದ.

ಮೇ ತಿಂಗಳಲ್ಲಿ ಈತ ಕಂಪ್ಯೂಟರ್​ಗಳನ್ನು ಇಡಲಾಗಿದ್ದ ಕೊಠಡಿಯ ನಕಲಿ ಕೀಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ. ಇಲ್ಲಿಂದ ವಸ್ತುಗಳನ್ನು ಕದ್ದು ತನ್ನ ಮನೆಗೆ ಸಾಗಿಸಿದ್ದ. ಕಳ್ಳತನ ಬೆಳಕಿಗೆ ಬರುತ್ತಿದ್ದಂತೆಯೇ ಸಿಎಂಆರ್​​ ಪಾತ್ರಾ ಮೇಲೆ ಶಂಕೆ ವ್ಯಕ್ತಪಡಿಸಿದೆ. ಆದರೆ ಅಷ್ಟರಲ್ಲಾಗಲೇ ಈತ ತಾನಿದ್ದ ಬಾಡಿಗೆ ಮನೆಯನ್ನೂ ಖಾಲಿ ಮಾಡಿಕೊಂಡು ತೆರಳಿದ್ದ. ಆದರೆ ಪೊಲೀಸರು ಈತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...