ಮೈಸೂರು: ಮೈಸೂರು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಓರ್ವ ಬಾಲಾಪರಾಧಿಯಾಗಿದ್ದಾನೆ ಎಂಬ ಶಾಕಿಂಗ್ ವಿಚಾರವನ್ನು ಡಿಜಿ, ಐಜಿಪಿ ಪ್ರವೀಣ್ ಸೂದ್ ಬಿಚ್ಚಿಟ್ಟಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ 24ರಂದು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ನಡೆಸಿದ್ದ ಆರೋಪಿಗಳು ರಾಬರಿಯನ್ನೂ ನಡೆಸಿದ್ದಾರೆ. ಬಳಿಕ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಐದು ಆರೋಪಿಗಳ ಪ್ರಾಥಮಿಕ ವಿಚಾರಣೆಯಲ್ಲಿ ಕಲೆ ಹಾಕಿದ ಮಾಹಿತಿ ಪ್ರಕಾರ ಎಲ್ಲಾ ಆರೋಪಿಗಳು ತಮಿಳುನಾಡು ಮೂಲದವರು. ಚಾಲಕ, ಕಾರ್ಪೆಂಟರ್ ಕೂಲಿ ಕೆಲಸದವರಾಗಿದ್ದಾರೆ. ಓರ್ವ ಆರೋಪಿ 8ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಇನ್ನೋರ್ವ 7ನೇ ತರಗತಿವರೆಗೆ ಹಾಗೂ ಇನ್ನೋರ್ವ ಅವಿದ್ಯಾವಂತ. ಆಘಾತಕಾರಿ ವಿಚಾರವೆಂದರೆ ಓರ್ವ ಬಾಲಾಪರಾಧಿ ಕೂಡ ಇದ್ದಾನೆ ಎಂದು ತಿಳಿಸಿದರು.
2 ವರ್ಷದ ಬಾಲಕಿ ಸಾವಿಗೆ ಕಾರಣವಾಯ್ತು ಮೊಬೈಲ್ ಚಾರ್ಜರ್…..!
ಆರೋಪಿಗಳು ಆಗಾಗ ಮೈಸೂರಿಗೆ ಬರುತ್ತಿದ್ದರು. ಬಂದು ವಾಪಸ್ ಹೋಗುವಾಗ ಗುಂಡು, ಪಾರ್ಟಿ ಮಾಡುತ್ತಿದ್ದರು. ಸದ್ಯದ ಮಾಹಿತಿ ಪ್ರಕಾರ ಆರೋಪಿಗಳಿಗೆ ಸಣ್ಣಪುಟ್ಟ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಗಳಿದೆ ಎಂದು ತಿಳಿಸಿದ್ದಾರೆ.
ಸಂತ್ರಸ್ತೆಯಿಂದ ಈವರೆಗೆ ಯಾವುದೇ ಒಂದು ಶಬ್ಧ ಗೊತ್ತಾಗಿಲ್ಲ. ಸಂತ್ರಸ್ತೆ ಶಾಕ್ ನಲ್ಲಿರುವುದರಿಂದ ಆಕೆಯಿಂದ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ. ಆಕೆಯ ಸ್ನೇಹಿತ ಸ್ವಲ್ಪ ಮಾಹಿತಿ ನೀಡಿದ್ದಾನೆಯಾದರೂ ಸರಿಯಾಗಿ ಆತನೂ ಏನನ್ನೂ ಹೇಳಿಲ್ಲ ಎಂದು ತಿಳಿಸಿದ್ದಾರೆ.