ಈಶಾನ್ಯ ಬ್ರೆಜಿಲ್‌ನ ಎರೆರೆ ನಗರದಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೊಬೈಲ್ ಫೋನ್ ಚಾರ್ಜರ್ ಸ್ಪರ್ಶಿಸಿ 2 ವರ್ಷದ ಹುಡುಗಿ ಸಾವನ್ನಪ್ಪಿದ್ದಾಳೆ.
ವರದಿ ಪ್ರಕಾರ, ಚಾರ್ಜರ್ ನಿಂದ ವಿದ್ಯುತ್ ಶಾಕ್ ಹೊಡೆದಿದೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಬಾಲಕಿ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದಾರೆ. ವಿದ್ಯುತ್ ಸ್ಪರ್ಶಕ್ಕೆ ಕಾರಣವಾದ ಚಾರ್ಜರ್, ಅಸಲಿಯೆ? ಅಥವಾ ನಕಲಿಯೆ ಎಂಬುದು ಗೊತ್ತಾಗಿಲ್ಲ.
ಸ್ಥಳೀಯ ಮೇಯರ್ ಇಮ್ಯಾನ್ಯುಯೆಲ್ ಗೋಮ್ಸ್ ಮಾರ್ಟಿನ್ಸ್ ಮುಗ್ಧ ಹುಡುಗಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಎರೆರೆ ಸರ್ಕಾರವು ಮುಗ್ಧ ಹುಡುಗಿಯ ಸಾವಿಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಮೇಯರ್ ಬರೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಲಕಿ ಸಾವಿಗೆ ಅನೇಕರು ದುಃಖ ವ್ಯಕ್ತಪಡಿಸಿದ್ದಾರೆ.
ಬ್ರೆಜಿಲ್ ನಲ್ಲಿ ವಿದ್ಯುತ್ ಶಾಕ್ ಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಬ್ರೆಜಿಲ್‌ನಲ್ಲಿ ವಿದ್ಯುತ್ ಶಾಕ್ ಗೆ 355 ಮಂದಿ ಸಾವನ್ನಪ್ಪಿದ್ದಾರೆ. ಕೆಲ ದಿನಗಳ ಹಿಂದೆ 28 ವರ್ಷದ ಯುವಕ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದ.