alex Certify ಖಾಸಗಿ ವಿಡಿಯೋ ಲೀಕ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟಿ ಪ್ರಿಯಾಂಕಾ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಸಗಿ ವಿಡಿಯೋ ಲೀಕ್ ಆದ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟಿ ಪ್ರಿಯಾಂಕಾ…..!

ಬೋಜ್​ಪುರಿ ಇಂಡಸ್ಟ್ರಿಯ ಬೋಲ್ಡ್​ ನಟಿ ಪ್ರಿಯಾಂಕಾ ಪಂಡಿತ್​ರ ಖಾಸಗಿ ವಿಡಿಯೋ ವೈರಲ್​ ಆದಾಗಿನಿಂದ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಗುರುವಾರ ಮಾಧ್ಯಮದ ಜೊತೆ ಮಾತನಾಡುವ ಮೂಲಕ ಈ ವಿಚಾರವಾಗಿ ಮೌನ ಮುರಿದಿದ್ದಾರೆ.

ಮತ್ತೊಬ್ಬ ಭೋಜ್​ಪುರಿ ನಟಿ ತ್ರಿಶಾ ಕರ್​​ ಮಧು ಖಾಸಗಿ ವಿಡಿಯೋ ವೈರಲ್​ ಆದ ಬಳಿಕ ಪ್ರಿಯಾಂಕಾರ ಎಂಎಂಎಸ್​ ಕೂಡ ವೈರಲ್​ ಆಗಿತ್ತು. ಇಂಟರ್ನೆಟ್​ನಲ್ಲಿ ಎರಡೂ ವಿಡಿಯೋಗಳನ್ನು ಹಂಚಿಕೊಳ್ಳಲಾಗ್ತಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆಯೇ ಪ್ರಿಯಾಂಕಾ ಇನ್​ಸ್ಟಾಗ್ರಾಂನಲ್ಲಿ ಕಮೆಂಟ್​ ವಿಭಾಗವನ್ನೇ ಬಂದ್ ಮಾಡಿದ್ದರು.

ಇದೀಗ ಈ ವಿಚಾರವಾಗಿ ಮೌನ ಮುರಿದಿರುವ ಪ್ರಿಯಾಂಕಾ, ಈ ವೈರಲ್​ ವಿಡಿಯೋದಲ್ಲಿ ಇರೋದು ತಾವಲ್ಲ ಎಂದಿದ್ದಾರೆ. ಇದು ಯಾರೋ ಬೇರೆಯ ಹುಡುಗಿಯ ವಿಡಿಯೋವಾಗಿದೆ. ಆದರೆ ನನ್ನ ಹೆಸರನ್ನು ಹಾಳು ಮಾಡುವ ನಿಟ್ಟಿನಲ್ಲಿ ಯಾರೋ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ತಮ್ಮ ವೃತ್ತಿ ಜೀವನಕ್ಕೆ ಧಕ್ಕೆ ತರಬೇಕು ಎಂತಲೇ ಈ ರೀತಿಯ ವಿಡಿಯೋಗಳನ್ನು ವೈರಲ್​ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋ ವೈರಲ್​ ಆದ ಬಳಿಕವೂ ನಟಿ ಪ್ರಿಯಾಂಕಾ ಮೊದಲಿನಂತೆಯೇ ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿದ್ದಾರೆ.

ಅಲ್ಲದೇ ಸೋಶಿಯಲ್ ಮೀಡಿಯಾ ಪೋಸ್ಟ್​ಗಳ ಮೂಲಕ ತಮಗೆ ಇದರಿಂದ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ ಎಂಬಂತೆ ಬಿಂಬಿಸಿಕೊಳ್ತಿದ್ದಾರೆ. ಮೊದಲಿನಂತೆಯೇ ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಶೇರ್​ ಮಾಡ್ತಿದ್ದಾರೆ.

 

https://www.instagram.com/p/CSo27XHsFUS/?utm_source=ig_web_copy_link

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...