ಮೈನವಿರೇಳಿಸುವ ಕೌಟುಂಬಿಕ ಗುಟ್ಟೊಂದನ್ನು ಹಂಚಿಕೊಂಡ ಟಿಕ್ ಟಾಕ್ ಬಳಕೆದಾರಿಣಿಯೊಬ್ಬರು, ತನ್ನಪ್ಪನಿಗೊಬ್ಬ ತದ್ರೂಪು ಅವಳಿ ಇದ್ದ ವಿಷಯವನ್ನು ಹೇಳಿಕೊಂಡಿದ್ದಾರೆ.
ತನ್ನಪ್ಪನ ಅವಳಿ ಸಹೋದರನ ಬಗ್ಗೆ ತನ್ನ ತಾಯಿ ಸೇರಿದಂತೆ ಕೆಲವೇ ಮಂದಿಗೆ ಮಾತ್ರವೇ ಗೊತ್ತಿತ್ತು ಎಂದಿರುವ ಈಕೆ, ಈ ಇಬ್ಬರೂ ಅವಳಿ ಸಹೋದರರು ತಾವಿದ್ದ ಜಾಗಗಳನ್ನು ಆಗಾಗ ಬದಲಿಸುತ್ತಿದ್ದರು ಎಂದಿದ್ದಾರೆ.
ಬೆಚ್ಚಿಬೀಳಿಸುವಂತಿದೆ ದೆವ್ವಗಳ ಬೆನ್ನತ್ತಿ ಹೊರಟ ಜೋಡಿಯ ಕ್ಯಾಮೆರಾ ಕಣ್ಣಿಗೆ ಕಂಡ ದೃಶ್ಯ
ಕೆಲವೊಮ್ಮೆ ತನ್ನ ಆರೈಕೆಯನ್ನು ಚಿಕ್ಕಪ್ಪನೇ ಮಾಡುತ್ತಿದ್ದರೂ ಸಹ ಅದು ಗೊತ್ತೇ ಆಗುತ್ತಿರಲಿಲ್ಲ ಈಕೆಗೆ.
ಇದಕ್ಕಿಂತ ವಿಚಿತ್ರವೆಂದರೆ, ಎಡ್ಡಿ ಹಾಗೂ ಫ್ರೆಡ್ಡಿ ಹೆಸರಿನ ಈ ಅವಳಿ ಸಹೋದರರಲ್ಲಿ ಒಬ್ಬರು ಮೃತಪಟ್ಟಾಗ ಯಾರು ಸತ್ತಿದ್ದಾರೆ ಎಂಬುದೇ ಕುಟುಂಬಕ್ಕೆ ತಿಳಿದುಬಂದಿರಲಿಲ್ಲ. ತನ್ನ ತಂದೆಗೊಬ್ಬ ಅವಳಿ ಇರುವುದು ಈಕೆಗೆ ಗೊತ್ತಾಗಿರುವುದು ಸಹ ಆ ಇಬ್ಬರು ಸಹೋದರರಲ್ಲಿ ಒಬ್ಬರು ಮೃತಪಟ್ಟಾಗಲೇ !
ಈಕೆಯ ಈ ಸ್ಟೋರಿ ತಿಳಿದ ನೆಟ್ಟಿಗರೀಗ, ’’ತನ್ನ ಪತಿಯಾಗಿ ಕಾಣುತ್ತಿರುವಾತ ಸಂಪೂರ್ಣವಾಗಿ ಬೇರೆಯ ವ್ಯಕ್ತಿ ಎಂದು ನಿಮ್ಮ ತಾಯಿಗೆ ಅದು ಹೇಗೆ ಗೊತ್ತಾಗದೇ ಇರಲು ಸಾಧ್ಯ?” ಎಂದು @brownsugabunnie30ಯನ್ನು ಪ್ರಶ್ನಿಸುತ್ತಿದ್ದಾರೆ.