ಆಗಸ್ಟ್ 25ರಂದು ಉಲ್ಲಾಸನಗರದಲ್ಲಿ ಬಿಜೆಪಿ ಕಾರ್ಪೋರೇಟರ್ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೇ ಮೈ ಮೇಲೆ ಶಾಹಿಯನ್ನು ಚೆಲ್ಲಿದ ಪಕ್ಷದ ಕಾರ್ಯಕರ್ತರನ್ನು ಶಿವಸೇನೆ ಇಂದು ಸನ್ಮಾನಿಸಿದೆ.
ಇದೇ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಅವರು ಬಿಜೆಪಿ ಕಾರ್ಪೋರೇಟರ್ ಪ್ರದೀಪ್ ರಾಮಚಂದನಿ ಮತ್ತೊಮ್ಮೆ ಉದ್ದವ್ ಠಾಕ್ರೆ ವಿರುದ್ಧ ನಾಲಗೆ ಹರಿಬಿಟ್ಟಲ್ಲಿ ನಾವು ಮತ್ತೆ ಈ ಕೆಲಸವನ್ನು ಮಾಡಬೇಕಾಗುತ್ತದೆ. ನಾವು ಮಾಡಿದ ಕಾರ್ಯದ ಬಗ್ಗೆ ನಮಗೆ ಹೆಮ್ಮೆ ಇದೆ ಹೀಗಾಗಿ ಯಾರೊಂದಿಗೂ ಕ್ಷಮೆ ಕೇಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ನಾರಾಯಣ ರಾಣೆ ನಿವಾಸದ ಎದುರು ಪ್ರತಿಭಟನೆ ನಡೆಸಿದ ಯುವ ಶಿವ ಸೈನಿಕರಿಗೂ ಶಿವಸೇನೆ ಪಕ್ಷದಲ್ಲಿ ಬಡ್ತಿ ನೀಡಿದೆ. ಈ ಸಂಬಂಧ ಘೋಷಣೆ ಮಾಡಿದ ಯುವಸೇನಾ ಕಾರ್ಯದರ್ಶಿ ವರುಣ್ ಸರ್ದೆಸಾಯಿ ಆದಿತ್ಯ ಠಾಕ್ರೆ ಜೊತೆ ಮೌಸಿನ್ ಶೇಖ್ ನಿಂತಿರುವ ಫೋಟೋವನ್ನ ಹಂಚಿಕೊಂಡಿದ್ದಾರೆ. ಶೇಖ್ರನ್ನು ಶಿವಸೇನೆ ಯಂಗ್ ವಿಂಗ್ನ ಜಂಟಿ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.