ಸಾಮಾಜಿಕ ನಿರೀಕ್ಷೆಗಳ ಭಾರವನ್ನೇ ಮೆಟ್ಟಿ ನಿಂತು ತನ್ನ ಮನಸಿಗೊಪ್ಪಿದ ಹಾಗೆ ಬದುಕುತ್ತಿರುವ ಆಸ್ಟ್ರೇಲಿಯಾದ ಸಿಡ್ನಿಯ ಪ್ಯಾಟ್ರಿಸಿಯಾ ಕ್ರಿಸ್ಟೀನ್, ಕಳೆದ ವರ್ಷ ಮೇನಲ್ಲಿ ಸುಂದರ ಸಮಾರಂಭವೊಂದರಲ್ಲಿ ಮದುವೆಯಾಗಿದ್ದಾರೆ.
30ನೇ ವಯಸ್ಸಿನೊಳಗೆ ಮದುವೆ ಆಗಿಬಿಡಬೇಕು ಎಂಬ ಅಲಿಖಿತ ಕಟ್ಟುಪಾಡಿಗೆ ಗುಡ್ ಬೈ ಹೇಳಿದ ಮಹಿಳೆಯೊಬ್ಬರು, ತಮ್ಮ ಮಾಜಿ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮುರಿದುಕೊಂಡ ಎಂಟು ವರ್ಷಗಳ ಬಳಿಕ ತಮ್ಮನ್ನು ತಾವೇ ಮದುವೆಯಾಗಿದ್ದಾರೆ !
ಕೇವಲ 30 ನಿಮಿಷಗಳಲ್ಲಿ ಮುಗಿದು ಹೋದ ಈ ಮದುವೆ ಸಮಾರಂಭದಲ್ಲಿ ಉಂಗುರ, ಹೂವುಗಳು, ಮದುವೆ ಧಿರಿಸಿಗೆಂದು ಒಟ್ಟಾರೆ ಬರೀ 50 ಪೌಂಡ್ ಖರ್ಚಾಗಿದೆ.
“ಸಾಮಾಜಿಕ ನಿರೀಕ್ಷೆಗಳನ್ನು ಮೆಟ್ಟಿ ನಿಂತು, ಅತ್ಯಂತ ಮಹತ್ವವಾದ ಸಂಬಂಧವೆಂದರೆ ಅದು ನಮ್ಮೊಂದಿಗೆ ನಾವೇ ಇಟ್ಟುಕೊಳ್ಳುವುದು ಎಂದು ಮಹಿಳೆಯರಿಗೆ ತೋರಲು ಇಚ್ಛಿಸುತ್ತೇನೆ. ಬೇರೊಬ್ಬರಿಗೆ ದೊಡ್ಡದೊಂದು ನಿರ್ಣಯದ ಬಗ್ಗೆ ಘೋಷಣೆ ಮಾಡಲು ನಾವು ಜೀವಮಾನವಿಡೀ ಶೋಧಿಸುತ್ತೇವೆ. ಆದರೆ ಇದೇ ಕಲಸವನ್ನು ನಾವು ನಮಗಾಗಿ ಮಾಡುವುದಿಲ್ಲ” ಎಂದು ಪ್ಯಾಟ್ರಿಸಿಯಾ ತಿಳಿಸಿದ್ದಾರೆ.