ಕೇಂದ್ರ ನೌಕರರ ಡಿಎ ಮತ್ತು ಪಿಂಚಣಿದಾರರಿಗೆ ಡಿಆರ್, ಶೇಕಡಾ 28ರಷ್ಟು ಹೆಚ್ಚಾಗಿದೆ. ಜುಲೈ ಒಂದರಿಂದ ಕೇಂದ್ರ ಸರ್ಕಾರಿ ನೌಕರರು ಇದ್ರ ಲಾಭ ಪಡೆಯಲು ಶುರು ಮಾಡಿದ್ದಾರೆ.
ಕೇಂದ್ರ ಸರ್ಕಾರ, ಡಿಎಯನ್ನು ಶೇಕಡಾ 17ರಿಂದ ಶೇಕಡಾ 28ಕ್ಕೆ ಹೆಚ್ಚಿಸಿದೆ. ಹಬ್ಬದ ಸಂದರ್ಭದಲ್ಲಿ ಮತ್ತೆ ಶೇಕಡಾ 3 ರಷ್ಟು ತುಟ್ಟಿ ಭತ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಒಂದು ವೇಳೆ ಮತ್ತೆ ಡಿಎ ಹೆಚ್ಚಾದಲ್ಲಿ, ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡಾ 31ರಷ್ಟು ತುಟ್ಟಿ ಭತ್ಯೆ ಸಿಗಲಿದೆ.
ಸರ್ಕಾರ ಶೀಘ್ರದಲ್ಲೇ ಶೇಕಡಾ 3ರಷ್ಟು ತುಟ್ಟಿ ಭತ್ಯೆ ಹೆಚ್ಚಳ ಘೋಷಣೆ ಮಾಡಬೇಕೆಂದು ನೌಕರರ ಒಕ್ಕೂಟ ಒತ್ತಾಯಿಸಿದೆ. ಇದರಿಂದ ನೌಕರರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸುಧಾರಿಸಲಿದೆ. ಡಿಎ ಶೇಕಡಾ 31.18 ರಷ್ಟು ಹೆಚ್ಚಾಗಲಿದೆ. ಆದ್ರೆ ಡಿಎ ಯಾವಾಗ್ಲೂ ರೌಂಡ್ ಫಿಗರ್ ನಲ್ಲಿ ಇರುವುದ್ರಿಂದ ಶೇಕಡಾ 31ರಷ್ಟು ಡಿಎ ಸಿಗಲಿದೆ. ಸೆಪ್ಟೆಂಬರ್ ವೇಳೆಗೆ ಸರ್ಕಾರ ಇದನ್ನು ಘೋಷಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ ತಿಂಗಳ ಸಂಬಳದಲ್ಲಿಯೇ ಈ ಹೆಚ್ಚಾದ ಹಣ ಸಿಗಲಿದೆ ಎಂದು ಅಂದಾಜಿಸಲಾಗಿದೆ.