ಫ್ಲೈಟ್ನಲ್ಲಿರುವಾಗಲೇ ಸಿಗರೇಟ್ ಹಚ್ಚಿಕೊಂಡು ಸೇದುತ್ತಿದ್ದ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ ಘಟನೆ ಡೆಟ್ರಾಯ್ಟ್ ವಿಮಾನ ನಿಲ್ದಾಣದಲ್ಲಿ ಜರುಗಿದೆ.
ಡೆಟ್ರಾಯ್ಟ್ನಿಂದ ಫೋರ್ಟ ಲಾಡರ್ಡೇಲ್ನತ್ತ ತೆರಳುತ್ತಿದ್ದ ಸ್ಪಿರಿಟ್ ಏರ್ಲೈನ್ಸ್ ವಿಮಾನವೊಂದರಲ್ಲಿ ಈ ಘಟನೆ ಜರುಗಿದೆ. ಈ ಕಿಡಿಗೇಡಿ ಯುವತಿಯ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಅಲೆಕ್ಸಾ ಮಜ಼್ದಾಲಾವಿ ಹೆಸರಿನ 31 ವರ್ಷ ವಯಸ್ಸಿನ ಮಹಿಳೆಗೆ ಆಸ್ತಮಾ ಸಮಸ್ಯೆ ಇದ್ದು, ಅವರ ಮುಖಕ್ಕೆ ಹೊಗೆ ಸೋಕಿ ಭಾರೀ ಕಿರಿಕಿರಿಯಾಗಿದೆ.
ಘಟನೆ ಕುರಿತಂತೆ ವಿಮಾನ ಸಿಬ್ಬಂದಿಯನ್ನು ಅಲರ್ಟ್ ಮಾಡಿದ ಮಜ಼್ಧಾಲಾವಿಗೆ ಬೇರೊಂದು ಸೀಟ್ನಲ್ಲಿ ಕೂರಲು ಸಲಹೆ ಬಂದ ಬಳಿಕ ಘಟನೆಯ ವಿಡಿಯೋ ಮಾಡಿಕೊಂಡಿದ್ದಾರೆ.
ವಿಮಾನ ಸಿಬ್ಬಂದಿ ಕೊಟ್ಟ ದೂರಿನನ್ವಯ ಬ್ರೋವಾರ್ಡ್ ಕೌಂಟಿ ಶೆರಿಫ್ ಪೊಲೀಸರು ಈ ಕಿಡಿಗೇಡಿ ಯುವತಿಯನ್ನು ವಿಮಾನದಿಂದ ತೆರವುಗೊಳಿಸಿದ್ದಾರೆ.
https://www.youtube.com/watch?v=u6YoG8kiJvI&feature=emb_logo