ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ನಂತರ ಅಲ್ಲಿನ ಜನರ ಪರಿಸ್ಥಿತಿ ಶೋಚನೀಯವಾಗಿದೆ. ವಿಮಾನ ನಿಲ್ದಾಣದಲ್ಲಿ ಕಂಡ ಹತಾಶ ಜನರ ಸ್ಥಿತಿ ನೋಡಿದರೆ ಕರುಳು ಹಿಂಡಿ ಬರುತ್ತೆ.
ಇದೇ ರೀತಿ ಹತ್ತು ಹಲವು ರೀತಿ ಹೃದಯ ವಿದ್ರಾವಕ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಬಾಲಕಿಯೊಬ್ಬಳು ಕುಣಿದಾಡಿರುವ ಫೋಟೋ ನೆಟ್ಟಿಗರ ಹೃದಯ ಗೆದ್ದಿದೆ.
ಹೌದು, ಅಫ್ಘನ್ ನಿಂದ ಬೆಲ್ಜಿಯಂಗೆ ಸ್ಥಳಾಂತರಿಸಿದ ನಂತರ ಚಿಕ್ಕ ಬಾಲಕಿಯೊಬ್ಬಳು ಖುಷಿಯಿಂದ ಕುಣಿದಿರುವ ಫೋಟೋ ಇದೀಗ ಎಲ್ಲರ ಮನ ಗೆದ್ದಿದೆ. ಮೆಲ್ಸ್ ಬ್ರೊಕ್ ವಿಮಾನ ನಿಲ್ದಾಣದಲ್ಲಿ ರಾಯಿಟರ್ಸ್ ಛಾಯಾಗ್ರಾಹಕ ಜೊಹಾನ್ನಾ ಜೆರಾನ್ ಈ ಫೋಟೋ ಕ್ಲಿಕ್ಕಿಸಿದ್ದಾರೆ.
ಭಾರೀ ದುರಂತ….! ವಾಹನಗಳು ಚಲಿಸುತ್ತಿರುವಾಗ್ಲೇ ಕುಸಿದು ಬಿದ್ದ ಸೇತುವೆ
ಇಬ್ಬರು ವಯಸ್ಕರನ್ನು (ಬಹುಶಃ ಆಕೆಯ ಹೆತ್ತವರಾಗಿರಬಹುದು ಎಂದು ಅಂದಾಜಿಸಲಾಗಿದೆ) ಹಿಂಬಾಲಿಸಿ ಬಾಲಕಿಯು ಸಂತೋಷದಿಂದ ಕುಣಿದಿದ್ದಾಳೆ. ಸದ್ಯ ಈ ಫೋಟೋ ಭಾರಿ ವೈರಲ್ ಆಗಿದೆ. ಪುಟ್ಟ ಹುಡುಗಿಗೆ ಬೆಲ್ಜಿಯಂಗೆ ಸ್ವಾಗತ ಅಂತೆಲ್ಲಾ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.