alex Certify ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಬೂಲ್​ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರು….!

ಸಾವಿರಾರು ಜನರ ಸಾವಿಗೆ ಕಾರಣವಾದ ಕಾಬೂಲ್​ ಏರ್​ಪೋರ್ಟ್ ಸಮೀಪ ನಡೆದ ಅವಳಿ ಬಾಂಬ್​ ಬ್ಲಾಸ್ಟ್​ನಲ್ಲಿ ಸುಮಾರು 160 ಸಿಖ್​ರು ಹಾಗೂ ಹಿಂದೂಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಅಫ್ಘನ್​ನಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು ಹಾಗೂ ಸಿಖ್​​ ನಾಗರಿಕರು ಗುರುದ್ವಾರವೊಂದರಲ್ಲಿ ಆಶ್ರಯ ಪಡೆದಿದ್ದಾರೆ.

ಸರಿ ಸುಮಾರು 145 ಸಿಖ್​​ರು ಹಾಗೂ 15 ಮಂದಿ ಹಿಂದೂಗಳು ಬ್ಲಾಸ್ಟ್​ ಸಂಭವಿಸುವ ಮುನ್ನ ಹಮಿದ್​ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದರು. ತಾಲಿಬಾನಿಗಳ ಆಡಳಿತದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಫ್ಘನ್​ನಿಂದ ಪಾರಾಗಲು ಎದುರು ನೋಡುತ್ತಿದ್ದರು.

ಆದರೆ ಬ್ಲಾಸ್ಟ್​ ಸಂಭವಿಸುವ ಮುನ್ನವೇ ಅವರು ವಾಪಸ್ಸಾಗಿದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನ ನಿಲ್ದಾಣದ ಜನನಿಬಿಡ ಗೇಟ್​ಗಳಲ್ಲಿ ಆತ್ಮಹತ್ಯಾ ಬಾಂಬರ್​ಗಳು ಕನಿಷ್ಟ 2 ಬಾರಿ ಬಾಂಬ್​ ಬ್ಲಾಸ್ಟ್​ ನಡೆಸಿದ್ದಾರೆ.

ತಾಲಿಬಾನಿಗಳ ಆಡಳಿತದಿಂದ ತಪ್ಪಿಸಿಕೊಂಡು ದೇಶದಿಂದ ಪಲಾಯನ ಮಾಡಬೇಕೆಂದು ನಿರ್ಧರಿಸಿದ ಹತಾಶ ನಾಗರಿಕರನ್ನು ಗುರಿಯಾಗಿಸಿ ಈ ಆತ್ಮಾಹುತಿ ದಾಳಿ ನಡೆಸಲಾಗಿತ್ತು.

ಮಾಹಿತಿಯ ಪ್ರಕಾರ ಈ ದಾಳಿಯಲ್ಲಿ ಕನಿಷ್ಟ ಮಕ್ಕಳು ಸೇರಿದಂತೆ 13 ಮಂದಿ ಸಾವನ್ನಪ್ಪಿದ್ದಾರೆ. 60ಕ್ಕೂ ಅಧಿಕ ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ದೆಹಲಿ ಸಿಖ್​ ಗುರುದ್ವಾರ ಆಡಳಿತ ಕಮಿಟಿ ಅಧ್ಯಕ್ಷ ಮಂಜಿಂದರ್​ ಸಿಂಗ್​ ಸಿರಾ ಗುರುವಾರ ಈ ವಿಚಾರವಾಗಿ ಮಾತನಾಡಿದ್ದು ಈ ಹತ್ಯಾಕಾಂಡದಿಂದ ತಪ್ಪಿಸಿಕೊಳ್ಳುವಲ್ಲಿ ತಂಡ ಯಶಸ್ವಿಯಾಗಿದೆ ಎಂದಿದ್ದಾರೆ.

ಇಂದು ಕಾಬೂಲ್​ನಲ್ಲಿ ಆತ್ಮಾಹುತಿ ದಾಳಿ ನಡೆದ ಜಾಗದಲ್ಲೇ ನಿನ್ನೆ ಈ ತಂಡ ನಿಂತಿತ್ತು ಎಂದು ಸಿರಾ ಟ್ವೀಟ್​ ಮಾಡಿದ್ದಾರೆ.

— Manjinder Singh Sirsa (मोदी का परिवार) (@mssirsa) August 26, 2021

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...