ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಸೆಪ್ಟೆಂಬರ್ ತಿಂಗಳ ಬ್ಯಾಂಕ್ ರಜಾ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ, ಬರುವ ತಿಂಗಳಲ್ಲಿ 7 ಬ್ಯಾಂಕ್ ರಜೆ ಇರುತ್ತದೆ.
ಈ 7 ರಜಾದಿನಗಳು ರಾಜ್ಯವಾರು ಬದಲಾಗಿರುತ್ತವೆ. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬದ ಆಚರಣೆಗಳನ್ನು ಆಧರಿಸಿ ರಜೆ ಇರಲಿದ್ದು, ಇದರ ಹೊರತಾಗಿ, ಮುಂದಿನ ವಾರದಲ್ಲಿ 6 ವಾರಾಂತ್ಯಗಳು ಮತ್ತು ರಜಾದಿನಗಳೂ ಇವೆ.
ಸೆಪ್ಟೆಂಬರ್ 5, 12, 19, 25 ಮತ್ತು 26 ರಂದು ಬ್ಯಾಂಕುಗಳು ಮುಚ್ಚಿರುತ್ತವೆ. ಸೆಪ್ಟೆಂಬರ್ 11 ರಂದು ಆರ್‌ಬಿಐ ತನ್ನ ಕಡ್ಡಾಯ ರಜೆಯನ್ನು ಹೊಂದಿದೆ, ಇದು ಎರಡನೇ ಶನಿವಾರದೊಂದಿಗೆ ಬರುತ್ತದೆ. ಹಾಗಾಗಿ ಸೆಪ್ಟೆಂಬರ್ ನಲ್ಲಿ ಒಟ್ಟು 12 ದಿನ ರಜಾದಿನಗಳಿರುತ್ತವೆ.
ಸೆಪ್ಟೆಂಬರ್ ನಲ್ಲಿ ಸ್ಥಳೀಯ ಪ್ರದೇಶ ಮತ್ತು ಆಚರಣೆಗಳ ಪ್ರಕಾರ ಬ್ಯಾಂಕುಗಳ ರಜಾದಿನಗಳ ಪಟ್ಟಿ
ಸೆಪ್ಟೆಂಬರ್ 8: ಶ್ರೀಮಂತ ಸಂಕರದೇವರ ತಿಥಿ
ಸೆಪ್ಟೆಂಬರ್ 9: ತೀಜ್ (ಹರಿತಾಳಿಕ)
ಸೆಪ್ಟೆಂಬರ್ 10: ಗಣೇಶ ಚತುರ್ಥಿ/ಸಂವತ್ಸರಿ (ಚತುರ್ಥಿ ಪಕ್ಷ)/ವಿನಾಯಕರ್ ಚತುರ್ಥಿ/ವರಸಿದ್ಧಿ ವಿನಾಯಕ ವ್ರತ.
ಸೆಪ್ಟೆಂಬರ್ 11: ಗಣೇಶ ಚತುರ್ಥಿ (2 ನೇ ದಿನ)
ಸೆಪ್ಟೆಂಬರ್ 17: ಕರ್ಮ ಪೂಜೆ
ಸೆಪ್ಟೆಂಬರ್ 20: ಇಂದ್ರಜಾತ್ರೆ
ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನ
ಇವುಗಳೊಂದಿಗೆ ವಾರಾಂತ್ಯ ರಜೆ, ಭಾನುವಾರ ರಜೆ ಕೂಡ ಇದೆ. ಈ ರಜೆಗಳು ಆಯಾ ರಾಜ್ಯಗಳಲ್ಲಿ ಬದಲಾವಣೆಗೆ ಒಳಪಟ್ಟಿರುತ್ತವೆ. ಚೆಕ್, ಹೂಡಿಕೆ, ವಿತ್ ಡ್ರಾ ಸೇರಿ ನಿಮ್ಮ ಯಾವುದೇ ವ್ಯವಹಾರಗಳಿದ್ದಲ್ಲಿ ಮೊದಲೇ ಪ್ಲಾನ್ ಮಾಡಿಕೊಳ್ಲುವುದು ಒಳ್ಳೆಯದು ಎಂದು ಹೇಳಲಾಗಿದೆ.