ಕಾಬೂಲ್: ಅಫ್ಘಾನಿಸ್ಥಾನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಹಾಗೂ ಅಮೆರಿಕ ಮಿತ್ರ ಪಡೆಯ ಯೋಧರು ತಂಗಿದ್ದ ಹೋಟೆಲ್ ಬಳಿ ನಡೆದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 90 ಕ್ಕೆ ಏರಿಕೆಯಾಗಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯ ಜನರಿದ್ದಾಗ ಆತ್ಮಾಹುತಿ ದಾಳಿ ನಡೆದಿದ್ದು, ಅಮೆರಿಕ ಯೋಧರು, ಮಕ್ಕಳು ಸೇರಿದಂತೆ ಅಫ್ಘಾನಿಸ್ತಾನ ನಾಗರಿಕರು ಮೃತಪಟ್ಟಿದ್ದಾರೆ. ಮೃತರ ಸಂಖ್ಯೆ 90 ಕ್ಕೆ ಏರಿಕೆಯಾಗಿದ್ದು, 160 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಭದ್ರತಾ ವ್ಯವಸ್ಥೆ ಇದ್ದರೂ ಬಾಂಬರ್ ಅಮೆರಿಕ ಪಡೆಗಳ ಸನಿಹಕ್ಕೆ ಬಂದು ಆತ್ಮಾಹುತಿ ದಾಳಿ ನಡೆಸಿದ್ದಾನೆ. ಈ ಸ್ಫೋಟಗಳ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಐಸಿಸ್ –ಕೆ ಹೊತ್ತುಕೊಂಡಿದೆ. ಇನ್ನೂ ಹೆಚ್ಚಿನ ದಾಳಿ ನಡೆಸಲು ಐಸಿಸ್ ಸಜ್ಜಾಗಿದೆ ಎಂದು ಅಮೆರಿಕ ಹೇಳಿದೆ.