ನವದೆಹಲಿ: ವಾಹನ ತೆರಿಗೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೊರೊನಾ ಕಾರಣದಿಂದಾಗಿ ಆಟೋಮೊಬೈಲ್ ಕ್ಷೇತ್ರಕ್ಕೆ ಹಿನ್ನಡೆಯಾಗಿದ್ದು, ಇದಕ್ಕೆ ಪುನಶ್ಚೇತನ ನೀಡುವ ಸಲುವಾಗಿ ತೆರಿಗೆ ಕಡಿತ ಮಾಡಲು ಸರ್ಕಾರ ಚಿಂತನೆ ನಡೆಸಿದೆ.
ಕೊರೋನಾ ನಂತರದಲ್ಲಿ ಆಟೋಮೊಬೈಲ್ ಕ್ಷೇತ್ರ ದುರ್ಬಲಗೊಂಡಿದ್ದು, ವಾಹನಗಳ ಮಾರಾಟದಲ್ಲಿ ಕುಸಿತ ಕಂಡಿದ್ದರ ಪರಿಣಾಮ ಆಟೋಮೊಬೈಲ್ ಕ್ಷೇತ್ರ ದುರ್ಬಲಗೊಂಡಿದೆ. ತೆರಿಗೆ ಹೇಳಿಕೆ ಮಾಡಿ ಹೊಸ ವಾಹನಗಳು ಕಡಿಮೆ ಬೆಲೆಗೆ ದೊರಕುವಂತೆ ಮಾಡಲಾಗುತ್ತದೆ. ಈ ಮೂಲಕ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗುತ್ತದೆ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
ಭಾರತೀಯ ಆಟೋಮೊಬೈಲ್ ಉತ್ಪಾದಕರ ಸಂಘದ 61ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಕೆಲ ವಲಯಗಳಿಗೆ ತೆರಿಗೆ ಕಡಿತ ಮಾಡುವ ಹಾಗೂ ಕೆಲವು ಕಾರುಗಳ ತೆರಿಗೆ ಕಡಿತ ಬಗ್ಗೆಯೂ ಸುಳಿವು ನೀಡಿದ್ದಾರೆ.
ಕಾರುಗಳು, ಮೋಟಾರ್ ಬೈಕ್ಗಳು ಮತ್ತು ಟ್ರಕ್ಗಳು ಸೇರಿದಂತೆ ಆಟೋಮೊಬೈಲ್ಗಳ ಮೇಲೆ ಜಿಎಸ್ಟಿ ದರವು ಶೇಕಡ 28 ರಷ್ಟಿದೆ, ಅದರ ಮೇಲೆ ಇತರ ತೆರಿಗೆಗಳನ್ನು ರಾಜ್ಯಗಳು ವಿಧಿಸುತ್ತವೆ. ಆಟೋಮೊಬೈಲ್ಗಳ ಮೇಲಿನ ತೆರಿಗೆ ದರಗಳ ಬದಲಾವಣೆಯನ್ನು ಚರ್ಚಿಸಲು ಕೇಂದ್ರವು ಮುಕ್ತವಾಗಿದೆ ಎಂದು ಹೇಳಿದ್ದಾರೆ,