36 ವರ್ಷದ ರೂಪದರ್ಶಿಯೊಬ್ಬಳು ಫೋಟೋಶೂಟ್ ಮಾಡುತ್ತಿರುವಾಗ ಚಿರತೆ ದಾಳಿಗೊಳಗಾಗಿ ಗಂಭೀರ ಗಾಯಗೊಂಡಿರುವ ಘಟನೆ ಜರ್ಮನಿಯಲ್ಲಿ ನಡೆದಿದೆ.
ಜೆಸ್ಸಿಕಾ ಲೀಡೋಲ್ಫ್, ಗಾಯಾಳು ಮಹಿಳೆ. ಫೋಟೋಶೂಟ್ ಗಾಗಿ ಚಿರತೆಗಳಿರುವ ಆವರಣವನ್ನು ಈಕೆ ಪ್ರವೇಶಿಸಿದ್ದಾಳೆ. ಇದರ ಮಾಲೀಕರು ನಿವೃತ್ತಿ ನಂತರ ಪ್ರಾಣಿಗಳ ಝೂ ನಡೆಸುತ್ತಿದ್ದಾರೆ. ಈ ವೇಳೆ ಸ್ವಯಂಪ್ರೇರಣೆಯಿಂದ ಚಿರತೆಗಳಿರುವ ಆವರಣ ಪ್ರವೇಶಿಸಿದ ಈಕೆಯ ಮೇಲೆ ದಾಳಿಯೆಸಗಿವೆ. ಕೂಡಲೇ ಈಕೆಯನ್ನು ಹೆಲಿಕಾಪ್ಟರ್ ಮುಖಾಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಬ್ಬಾ…..! ಒಂದು ವರ್ಷದ ಮಗು ಎತ್ತಿದ ಚೆಂಡಿನ ತೂಕ ಎಷ್ಟು ಗೊತ್ತಾ…..?: ಭವಿಷ್ಯದ ಒಲಿಂಪಿಯನ್ ಅಂದ್ರು ನೆಟ್ಟಿಗರು..!
ಚಿರತೆ ದಾಳಿಯಿಂದ ಜೆಸ್ಸಿಕಾ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎನ್ನಲಾಗಿದೆ. ಇನ್ನು ಚಿರತೆಯ ಆವರಣದಲ್ಲಿ ಫೋಟೋಶೂಟ್ ವ್ಯವಸ್ಥೆ ಯಾರು ಮಾಡಿದ್ದರು ಅನ್ನೋ ಬಗ್ಗೆ ತಿಳಿದು ಬಂದಿಲ್ಲ. ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.