ವಿಲಕ್ಷಣವಾಗಿ ಕಾಣುವ ಕೀಟವೊಂದರ ಫೋಟೋವನ್ನು ಮಹಿಳೆಯೊಬ್ಬಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಪರಭಕ್ಷಕಗಳನ್ನು ಹೆದರಿಸಲು ಇದು ಹಾವನ್ನು ಅನುಕರಿಸಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟ್ ವಿಟ್ಮಾರ್ಶ್ ಎಂಬವರು ತನ್ನ ಕುಟುಂಬದೊಂದಿಗೆ ವಿಡಿಯೋ ಕಾಲ್ ಮಾಡುತ್ತಿದ್ದಾಗ ಅವರ ತೋಟದಲ್ಲಿ ಅಜ್ಜ-ಅಜ್ಜಿಯರು ಕಂಡುಕೊಡ ಜೀವಿಯನ್ನು ಪರಿಚಯಿಸಿದರು. ಆದರೆ ಅದು ಏನೆಂಬುದರ ಬಗ್ಗೆ ಆಕೆಗೆ ಗೊತ್ತಾಗದ ಕಾರಣ ಫೇಸ್ ಬುಕ್ ನಲ್ಲಿ ಆ ಜೀವಿಯ ಫೋಟ್ ಪೋಸ್ಟ್ ಮಾಡಿದ್ದಳು. ಆದರೆ ಇದೇನೆಂದು ಗೊತ್ತಾಗದ ಸ್ನೇಹಿತರು ಭೀತಿಗೊಂಡು ಭೂತೋಚ್ಛಾಟನೆ ಮಾಡು ಅಂತಾ ಸಲಹೆ ನೀಡಿದರು.
BIG NEWS: ಗೃಹ ಸಚಿವರ ‘ರೇಪ್’ ಹೇಳಿಕೆ; ಆರಗ ಜ್ಞಾನೇಂದ್ರ ವಿರುದ್ಧ ಡಿ.ಕೆ.ಶಿವಕುಮಾರ್ ಆಕ್ರೋಶ
“ತಾನು ಪ್ರಾಣಿ ಸತ್ತ ಅಥವಾ ಒಣಗಿದ ಹಾವು ಎಂದು ಆರಂಭದಲ್ಲಿ ಭಾವಿಸಿದ್ದೆ. ಆದರೆ ಅದು ಸತ್ತಿರಲಿಲ್ಲ, ಚಲಿಸಿತು” ಎಂದು ಬ್ರಿಟ್ ಹೇಳಿದಳು. ಅಂತಿಮವಾಗಿ ಈಕೆಯ ಸಮಸ್ಯೆಯನ್ನು ಪರಿಹರಿಸಿದ ಚೆಸ್ಟರ್ ಮೃಗಾಲಯದ ಪ್ರಾಣಿ ಹಾಗೂ ಸಸ್ಯ ನಿರ್ದೇಶಕರಾದ ಜೋರ್ಡಾನ್, ಈ ಕೀಟವು ಎಲಿಫೆಂಟ್ ಹಾಕ್ಮೋತ್ ಎಂದು ಸ್ಪಷ್ಟಪಡಿಸಿದರು.
“ಈ ಕೀಟವು ಪತಂಗದ ಜಾತಿಗೆ ಸೇರಿದ್ದು, ಕ್ಯಾಟರ್ಪಿಲ್ಲರ್ ಎಂಬುದು ಇದರ ಸಾಮಾನ್ಯ ಹೆಸರು ಎಂದು ಹೇಳಿದ್ದಾರೆ. ಇವು ಮಧ್ಯ ಯುರೋಪ್ ನಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಕೀಟವು ಅತ್ಯಂತ ವಿಶಿಷ್ಟವಾದ ರಕ್ಷಣಾ ಕಾರ್ಯವಿಧಾನವನ್ನು ಹೊಂದಿದೆ. ಪರಭಕ್ಷಕಗಳನ್ನು ಹೆದರಿಸಲು ಹಾವಿನಂತೆ ತಲೆಯ ಹಿಂದೆ ಇರುವ ಭಾಗಗಳನ್ನು ಉಬ್ಬಿಸಿ ಹೆದರಿಸುತ್ತದೆ” ಎಂದು ಜೋರ್ಡಾನ್ ಹೇಳಿದ್ದಾರೆ.