alex Certify ಮೊದಲ ದಿನ ಶಾಲೆಗೆ ಹೊರಟಿದ್ದ ಸಹೋದ್ಯೋಗಿಯ ಪುತ್ರನಿಗೆ ಎಸ್ಕಾರ್ಟ್ ಗೌರವ ಕೊಟ್ಟ ಅಧಿಕಾರಿಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ದಿನ ಶಾಲೆಗೆ ಹೊರಟಿದ್ದ ಸಹೋದ್ಯೋಗಿಯ ಪುತ್ರನಿಗೆ ಎಸ್ಕಾರ್ಟ್ ಗೌರವ ಕೊಟ್ಟ ಅಧಿಕಾರಿಗಳು….!

ಅಪ್ಪನನ್ನು ಕಳೆದುಕೊಂಡ ಟೆಕ್ಸಾಸ್‌ನ ಪುಟ್ಟ ಬಾಲಕನೊಬ್ಬನನ್ನು ಶಾಲೆಗೆ ಮೊದಲ ದಿನ ಹೋಗುವ ವೇಳೆ ಎಸ್ಕಾರ್ಟ್‌ಗಳನ್ನು ಜೊತೆಗಿದ್ದು, ಆತನನ್ನು ಚಿಯರ್‌‌ಅಪ್ ಮಾಡಿದ್ದಾರೆ.

ಇಲ್ಲಿನ ಫ್ರಯೋ ಕೌಂಟಿ ಶೆರೀಫ್ ಕಚೇರಿಯ ಅಧಿಕಾರಿಗಳು ಬಾಲಕನನ್ನು ಬಹಳ ಪ್ರೀತಿಯಿಂದ ಆತನ ಶಾಲೆಯ ಕ್ಯಾಂಪಸ್ ಹೊರಗೆ ಕಾಯುತ್ತಾ, ತಮ್ಮ ಮಾಜಿ ಸಹೋದ್ಯೋಗಿಯ ಮಗನಿಗೆ ಮನದುಂಬಿ ಹಾರೈಸಿದ್ದಾರೆ.

“ನಮ್ಮ ಪುಟಾಣಿ ಡೆಪ್ಯೂಟಿಯನ್ನು ಆತನ ಶಾಲೆಗೆ ಎಸ್ಕಾರ್ಟ್ ಮಾಡಲು ನಮಗೆ ಹೆಮ್ಮೆಯೆನಿಸುತ್ತದೆ. ನಮ್ಮ ಸಮವಸ್ತ್ರ ಸಹೋದರ ಜಸ್ಟಿನ್ ಲೊಂಗೋರಿಯಾರನ್ನು ಪ್ರತಿನಿತ್ಯ ಮಿಸ್ ಮಾಡಿಕೊಂಡರೂ ಸಹ, ಅವರ ಮಕ್ಕಳ ಶಾಲಾದಿನಗಳಲ್ಲಿ ಅವರಿಗೆ ಒಂದಷ್ಟು ಸಂತಸದ ಕ್ಷಣಗಳನ್ನು ಸೃಷ್ಟಿಸಲು ಇಷ್ಟ ಪಡುತ್ತೇವೆ,” ಎಂದು ಮುಖ್ಯ ಡೆಪ್ಯೂಟಿ ಸಲಿನಾಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಕಾರ್ಪೋರಲ್ ಪತ್ತೇದಾರರಾಗಿ ಕೆಲಸ ಮಾಡುತ್ತಿದ್ದ ಜಸ್ಟಿನ್ ಲೊಂಗೋರಿಯಾ ಈ ವರ್ಷದ ಏಪ್ರಿಲ್‌ನಲ್ಲಿ ರಸ್ತೆ ಅಫಘಾತದಲ್ಲಿ ನಿಧನರಾಗಿದ್ದರು.

https://twitter.com/WarnockWarrior/status/1430434680843743240?ref_src=twsrc%5Etfw%7Ctwcamp%5Etweetembed%7Ctwterm%5E1430434680843743240%7Ctwgr%5E%7Ctwcon%5Es1_&ref_url=https%3A%2F%2Findianexpress.com%2Farticle%2Ftrending%2Ftrending-globally%2Ftexas-officers-escort-deceased-detective-son-to-school-7470113%2F

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...