ಬ್ಯಾಂಕುಗಳು ಮತ್ತು ಬ್ಯಾಂಕೇತರ ಸಂಸ್ಥೆಗಳಂತೆ, ಗೂಗಲ್ ಕೂಡ ಎಫ್ಡಿ ಯೋಜನೆ ಶುರು ಮಾಡಲಿದೆ. ಭಾರತದ ಗ್ರಾಹಕರಿಗಾಗಿ ಗೂಗಲ್ ಈ ವಿಶೇಷ ಯೋಜನೆಯನ್ನು ಆರಂಭಿಸಲಿದೆ. ಗ್ರಾಹಕರು, ಗೂಗಲ್ ಪೇನಲ್ಲಿ ಸ್ಥಿರ ಠೇವಣಿ ಖರೀದಿಸಬಹುದಾಗಿದೆ. ಇದಕ್ಕಾಗಿ ಗೂಗಲ್ ಒಂದು ಫಿನ್‌ಟೆಕ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಎಫ್‌ಡಿ ಯೋಜನೆಗಾಗಿ, ಫಿನ್‌ಟೆಕ್ ಕಂಪನಿ ಸೇತು ಜೊತೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ. ಎಫ್ಡಿ ಯೋಜನೆಯನ್ನು ಭಾರತದ ಗ್ರಾಹಕರಿಗೆ ಸೇತು ಎಪಿಐ ಮೂಲಕ ಮಾತ್ರ ನೀಡಲಾಗುವುದು. ನಿಶ್ಚಿತ ಠೇವಣಿ ಯೋಜನೆಯನ್ನು ಗ್ರಾಹಕರಿಗೆ ಗೂಗಲ್ ಪೇ ಮೂಲಕ ನೀಡಲಾಗುತ್ತದೆ. ಗೂಗಲ್ ತನ್ನದೇ ಎಫ್‌ಡಿ ಯೋಜನೆಯನ್ನು ಮಾರಾಟ ಮಾಡುವುದಿಲ್ಲ. ಆದರೆ ಇತರ ಬ್ಯಾಂಕ್‌ಗಳ ಎಫ್‌ಡಿಗಳನ್ನು ಗೂಗಲ್ ಪೇ ಮೂಲಕ ಗ್ರಾಹಕರಿಗೆ ನೀಡುತ್ತದೆ. ಆರಂಭದಲ್ಲಿ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್ಡಿಯನ್ನು ಗ್ರಾಹಕರಿಗೆ ನೀಡಲಾಗುವುದು.
ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಫ್ಡಿಯನ್ನು 1 ವರ್ಷಕ್ಕೆ ನೀಡಲಾಗುತ್ತದೆ. ಗ್ರಾಹಕರಿಗೆ ಇದರ ಮೇಲೆ ಗರಿಷ್ಠ ಶೇಕಡಾ 6.35 ರಷ್ಟು ಬಡ್ಡಿ ನೀಡಲಾಗುತ್ತದೆ. ಗೂಗಲ್ ಎಫ್ಡಿ ಯೋಜನೆಯನ್ನು ತೆಗೆದುಕೊಳ್ಳಲು, ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವ ಮೂಲಕ ಕೆವೈಸಿ ಮಾಡಬೇಕಾಗುತ್ತದೆ. ಆಧಾರ್ ಸಂಖ್ಯೆಯ ಆಧಾರದ ಮೇಲೆ, ಮೊಬೈಲ್ ನಲ್ಲಿ ಒಟಿಪಿ ಬರುತ್ತದೆ. ಸೇತು, ಎಪಿಐಗಾಗಿ ಬೀಟಾ ಆವೃತ್ತಿಯನ್ನು ಸಿದ್ಧಪಡಿಸಿದೆ. ಇದಕ್ಕಾಗಿ ಬ್ಯಾಂಕ್ ಗೆ ಹೋಗಬೇಕಾಗಿಲ್ಲ. ಹಾಗೆ, ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರಬೇಕಾಗಿಲ್ಲ.
ಗೂಗಲ್ ಪೇ ನಿಂದ ಎಫ್ಡಿ ಹಣವನ್ನು ಜಮಾ ಮಾಡಲಾಗುತ್ತದೆ. ಎಫ್ಡಿ ಪಕ್ವವಾದಾಗ, ಹಣವನ್ನು ಗ್ರಾಹಕರ ಗೂಗಲ್ ಪೇ ಖಾತೆಗೆ ವರ್ಗಾಯಿಸಲಾಗುತ್ತದೆ.