ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಬ್ಯಾಂಕ್ ಆಫ್ ಬರೋಡಾ, ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಸೇವೆ ನೀಡುತ್ತಿದೆ. ಇದು ಸೆಪ್ಟೆಂಬರ್ 30, 2021 ರಂದು ಬಂದ್ ಆಗಲಿದೆ.
ಮೇ 2020 ರಲ್ಲಿ ಹಿರಿಯ ನಾಗರಿಕರಿಗಾಗಿ ಬ್ಯಾಂಕುಗಳು ವಿಶೇಷ ಕೊಡುಗೆಯನ್ನು ನೀಡಿವೆ. ಹಿರಿಯ ನಾಗರಿಕರ ಎಫ್.ಡಿ. ಖಾತೆ ಮೇಲೆ ಬ್ಯಾಂಕ್ ಹೆಚ್ಚುವರಿ ಬಡ್ಡಿಯನ್ನು ನೀಡುತ್ತದೆ. ಸಾಮಾನ್ಯ ಗ್ರಾಹಕರು ಪಡೆಯುವ ಬಡ್ಡಿಗಿಂತ ಶೇಕಡಾ 1 ರಷ್ಟು ಹೆಚ್ಚು ಬಡ್ಡಿಯನ್ನು ಬ್ಯಾಂಕ್ ನೀಡುತ್ತದೆ.
5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಹಿರಿಯ ನಾಗರಿಕರಿಗಾಗಿ ಬ್ಯಾಂಕುಗಳು ವಿಶೇಷ ಎಫ್‌ಡಿ ಯೋಜನೆಯನ್ನು ಹೊಂದಿವೆ. ಇದನ್ನು ಸೆಪ್ಟೆಂಬರ್ 30, 2020 ರವರೆಗೆ ವಿಸ್ತರಿಸಲಾಗಿತ್ತು. ನಂತರ ಅದನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಯಿತು. ನಂತರ ಮಾರ್ಚ್ 31 ರವರೆಗೆ ವಿಸ್ತರಿಸಲಾಯ್ತು. ನಂತ್ರ ಜೂನ್ 30ರವರೆಗೆ ಅವಕಾಶ ನೀಡಲಾಗಿತ್ತು. ನಂತ್ರ ಸೆಪ್ಟೆಂಬರ್ 30ರವರೆಗೆ ಅವಧಿ ವಿಸ್ತರಿಸಲಾಗಿದೆ.
ಎಸ್‌ಬಿಐ, ಐದು ವರ್ಷಗಳ ಅವಧಿಗೆ ಸಾಮಾನ್ಯ ಗ್ರಾಹಕರಿಗೆ ಶೇಕಡಾ 5.4ರ ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರಿಗೆ ವಿಶೇಷ ಎಫ್ಡಿ ಯೋಜನೆಯಡಿ ಶೇಕಡಾ 6.20ರಷ್ಟು ಬಡ್ಡಿಯನ್ನು ನೀಡುತ್ತದೆ.
ಎಚ್ಡಿಎಫ್ಸಿ ಬ್ಯಾಂಕ್, ಠೇವಣಿಗಳ ಮೇಲೆ ಶೇಕಡಾ 0.75 ರಷ್ಟು ಹೆಚ್ಚು ಬಡ್ಡಿಯನ್ನು ನೀಡುತ್ತದೆ. ಹಿರಿಯ ನಾಗರಿಕರು, ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಅಡಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿದರೆ, ಎಫ್ಡಿಗೆ ಅನ್ವಯವಾಗುವ ಬಡ್ಡಿ ದರ ಶೇಕಡಾ 6.25ರಷ್ಟಾಗಿರುತ್ತದೆ.
ಬ್ಯಾಂಕ್ ಆಫ್ ಬರೋಡಾ, ವಿಶೇಷ ಎಫ್ಡಿ ಯೋಜನೆಯಡಿ, ಹಿರಿಯ ನಾಗರಿಕರು ನಿಶ್ಚಿತ ಠೇವಣಿ ಮಾಡಿದರೆ, ಎಫ್ಡಿಗೆ ಅನ್ವಯವಾಗುವ ಬಡ್ಡಿದರವು ಶೇಕಡಾ 6.25 ಆಗಿರುತ್ತದೆ.