ಬೆಂಗಳೂರು: ಜಮೀನಿನ ಬೌಂಡರಿ ಲೈನ್ ಫಿಕ್ಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಂದಾಯ ಇಲಾಖೆ ಉನ್ನತಾಧಿಕಾರಿ ಹಾಗೂ ಆತನ ಸಹಾಯಕ ಸಿಬ್ಬಂದಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ರೆವೆನ್ಯೂ ಡಿಪಾರ್ಟ್ ಮೆಂಟ್ ಅಸಿಸ್ಟೆಂಟ್ ಡೈರೆಕ್ಟರ್ ಆನಂದ್ ಹಾಗೂ ಸಹಾಯಕ ರಮೇಶ್ ಬಂಧಿತ ಆರೋಪಿಗಳು. ಲಂಚಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಮೂರು ಕಡೆ ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ.
ಕಂದಾಯ ಇಲಾಖೆ ಉನ್ನತಾಧಿಕಾರಿ ಆನಂದ್ ಅಡ್ವಾನ್ಸ್ ಆಗಿ 20 ಲಕ್ಷ ಹಣ ಪಡೆದುಕೊಂಡಿದ್ದು, ಉಳಿದ ಹಣಕ್ಕಾಗಿ ಚೆಕ್ ಪಡೆದುಕೊಂಡಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಆನಂದ್ ಅವರ ಜಾಲಹಳ್ಳಿ ಮನೆ, ಕುಸುಮಲತಾ ಮನೆ, ಸರ್ವೆ ಅಧಿಕಾರಿ ಶ್ರೀನಿವಾಸ್ ಅವರ ತುಮಕೂರಿನ ಮನೆ ಸೇರಿ ಮೂರು ಕಡೆ ದಾಳಿ ನಡೆಸಿದ್ದಾರೆ.