ಕೊರೊನಾ ಲಸಿಕೆಗಾಗಿ ದೊಡ್ಡ ಸರತಿ ಸಾಲುಗಳಿರುವುದನ್ನು ಅಲ್ಲಲ್ಲಿ ಕಾಣುತ್ತಿರುತ್ತೇವೆ. ಗಂಟೆಗಟ್ಟಲೆ ಕಾದು, ಲಸಿಕೆ ಸಿಗದೆಯೇ ಬೈದುಕೊಂಡು ಮನೆಗೆ ಬಂದವರೂ ಇದ್ದಾರೆ. ಆದರೆ, ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಸುಕುಲಾವಾನ್ ಲಸಿಕಾ ಕೇಂದ್ರದಲ್ಲಿ ಮಾತ್ರ ಒಬ್ಬ ಭೂಪ, ಸರತಿ ಸಾಲಿಗೆ ಚಳ್ಳೆಹಣ್ಣು ತಿನ್ನಿಸಿದ್ದಾನೆ.
ಬರೋಬ್ಬರಿ 500 ಮಂದಿ ಲಸಿಕೆಗಾಗಿ ಕ್ಯೂ ನಿಂತಿರುವುದನ್ನು ಕಂಡ ಬಿಹಾರದ ಭೂಪ, ನಿಂತು ಕಾದರೆ ಲಸಿಕೆ ಸಿಗಲ್ಲ ಎಂದು ಮನವರಿಕೆ ಮಾಡಿಕೊಂಡ. ಕೂಡಲೇ ಲಸಿಕಾ ಕೇಂದ್ರದ ಮೇಲೆ ಏರಿಕೊಂಡು, ಆತ ಸೀದಾ ತಲುಪಿದ್ದು ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅವರ ಕಚೇರಿಯ ಕಿಟಕಿ ಮೇಲೆ.
ಕಂಡೋರ ಹಣವನ್ನೆಲ್ಲಾ ಖಾತೆಗೆ ಹಾಕಿದ್ರೇ ಅಷ್ಟೇ..!
ಕೈಮುಗಿದು ಮನವಿ ಮಾಡಿದ ಭೂಪನಿಗೆ ಅಧಿಕಾರಿ ಲಸಿಕೆಯ ಒಂದು ಡೋಸ್ ಚುಚ್ಚಿ, ಕಟ್ಟಡದಿಂದ ಕೆಳಗೆ ಇಳಿಯಲು ಮನವಿ ಮಾಡುವಂತಹ ಪರಿಸ್ಥಿತಿ ನಿರ್ಮಿಸಿದ್ದಾನೆ ಆಸಾಮಿ. ಈ ವಿಡಿಯೊ ಭಾರಿ ವೈರಲ್ ಆಗಿದೆ.