ಸಾಲ ನೀಡಿದವರು ಹಿಂದಿರುಗಿಸಲಿಲ್ಲ ಎಂದು ಅವರ ಸಣ್ಣ ವಯಸ್ಸಿನ ಪುತ್ರಿಯರನ್ನು ಎತ್ತುಕೊಂಡು ಬಂದು ತನ್ನಲ್ಲಿ ಒತ್ತೆ ಇರಿಸಿಕೊಂಡಿದ್ದ 38 ವರ್ಷದ ರಾಜನ್ ಎಂಬಾತನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ತಿರುವಣ್ಣಾಮಲೈ ಜಿಲ್ಲೆಯಲ್ಲಿ ಈ ಘಟನೆ ಜರುಗಿದೆ.
ಒಂದು ವರ್ಷದ ಹಿಂದೆ ರಾಜನ್, ತನ್ನ ಪತ್ನಿಯ ಸೋದರ ರಘುಗೆ 2.80 ಲಕ್ಷ ರೂ. ಸಾಲ ಕೊಟ್ಟಿದ್ದ. ಕೊರೊನಾ ದಾಳಿಯಿಂದಾಗಿ ರಘು ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದರಿಂದ ನಿಗದಿತ ಸಮಯಕ್ಕೆ ಸಾಲ ಹಿಂದಿರುಗಿಸಲು ಆಗಿರಲಿಲ್ಲ. ಪದೇಪದೆ ಕೇಳಿ ಬೇಸತ್ತ ರಾಜನ್, ರಘುವಿನ ಮನೆಗೆ ನುಗ್ಗಿದ್ದ. ಆದರೆ ಮನೆಯಲ್ಲಿ ರಘು ಮತ್ತು ಪತ್ನಿ ಇರಲಿಲ್ಲ. ಹೊರಗೆ ಹೋಗಿದ್ದರು.
BIG NEWS: ಜಮೀರ್ ಅಹ್ಮದ್ ಗೆ ED ಬುಲಾವ್; ದೆಹಲಿಗೆ ದೌಡಾಯಿಸಿದ ಶಾಸಕ
ಅವರ ಮೂವರು ಹೆಣ್ಣುಮಕ್ಕಳ ಜತೆಗೆ ಪಕ್ಕದ ಮನೆಯ ಮಗು ಕೂಡ ಮನೆಯಲ್ಲೇ ಆಟವಾಡಿಕೊಂಡಿತ್ತು. ಕೂಡಲೇ ಅವರನ್ನೆಲ್ಲ ರಾಜನ್ ಎಳೆದುಕೊಂಡು ತನ್ನ ಮನೆಗೆ ಕರೆತಂದಿದ್ದ. ಗಾಬರಿಗೊಂಡ ರಘು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ರಾಜನ್ನನ್ನು ಬಂಧಿಸಲಾಗಿದೆ.