ಕೊರೊನಾ ನಿರೋಧಕ ಲಸಿಕೆಗಳನ್ನು ಉತ್ಪಾದಿಸುತ್ತಿರುವ ಅಮೆರಿಕದ ದೈತ್ಯ ಔಷಧ ತಯಾರಿಕೆ ಕಂಪನಿಗಳಲ್ಲಿ ಒಂದಾದ ಜಾನ್ಸನ್ ಆ್ಯಂಡ್ ಜಾನ್ಸನ್ (ಜೆ ಆ್ಯಂಡ್ ಜೆ) ಕಂಪನಿಯು ‘ಜಾನ್ಸೆನ್’ ಹೆಸರಿನ ಲಸಿಕೆ ಅಭಿವೃದ್ಧಿಪಡಿಸಿದೆ.
ಇದು ಎರಡು ಡೋಸ್ ಗಳ ಲಸಿಕೆಯಾಗಿದೆ. ಇದರಲ್ಲಿ ಮೊದಲ ಡೋಸ್‍ಗಿಂತಲೂ 2ನೇ ಡೋಸ್ ಒಂಭತ್ತು ಪಟ್ಟು ಹೆಚ್ಚು ಪ್ರಮಾಣದಲ್ಲಿ ರೋಗ ನಿರೋಧಕತೆಯನ್ನು ಪ್ರಚೋದಿಸುವ ಶಕ್ತಿ ಹೊಂದಿದೆ ಎಂದು ಕಂಪನಿ ಹೇಳಿಕೊಂಡಿದೆ. ಎರಡು ಪ್ರಯೋಗಗಳಲ್ಲಿ ಈ ಅಂಶ ಸಾಬೀತಾಗಿದೆ ಎಂದು ಕಂಪನಿ ಹೇಳಿದೆ.
ಕೊರೊನಾ ಕಾರಣಕ್ಕೆ ಪ್ರಾಮುಖ್ಯತೆ ಪಡೆದುಕೊಂಡ ʼನಮಸ್ತೆʼ
ಈಗಾಗಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ಎಲ್ಲ ವಯೋಮಾನದ ಅಮೆರಿಕನ್ನರಿಗೆ 3ನೇ ಡೋಸ್ (ಬೂಸ್ಟರ್ ಡೋಸ್) ಲಸಿಕೆಯನ್ನು ಪಡೆಯಲು ಸೂಚಿಸಿದ್ದಾರೆ. ಅದರಲ್ಲೂ ಫೈಜರ್ ಮತ್ತು ಮಾಡೆರ್ನಾ ಕಂಪನಿಗಳ ಲಸಿಕೆ ಪಡೆದವರಿಗೆ 2ನೇ ಡೋಸ್ ಹಾಕಿಸಿಕೊಂಡ 8 ತಿಂಗಳ ಬಳಿಕ ಮೂರನೇ ಡೋಸ್‍ಗೆ ನೀಡಲು ಸರಕಾರ ಸಿದ್ಧತೆ ಕೂಡ ನಡೆಸಿದೆ.