ಶಾರೀರಿಕ ಸಂಬಂಧ ಬೆಳೆಸುವ ವೇಳೆ ಪತಿಯ ಹತ್ಯೆಗೆ ಪ್ಲಾನ್ ಮಾಡಿದ್ದ ಮಹಿಳೆಯೊಬ್ಬಳ ಬಣ್ಣ ಬದಲಾಗಿದೆ. ಬೆಡ್ ರೂಮಿಗೆ ಬರ್ತಿದ್ದಂತೆ ಅನುಮಾನಗೊಂಡ ಪತಿ, ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಗ ಪತ್ನಿಯ ಸತ್ಯ ಗೊತ್ತಾಗಿದೆ.
ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಪತಿ ಹತ್ಯೆಗೆ ಪ್ಲಾನ್ ಮಾಡಿದ್ದ ಪತ್ನಿ, ಖಾಸಗಿ ಅಂಗಕ್ಕೆ ವಿಷ ಹಾಕಿಕೊಂಡಿದ್ದಳು. ನಂತ್ರ ಓರಲ್ ಸೆಕ್ಸ್ ಗೆ ಒತ್ತಾಯ ಮಾಡಿದ್ದಾಳೆ. ಖಾಸಗಿ ಅಂಗದಿಂದ ವಾಸನೆ ಬರ್ತಿದ್ದಂತೆ ಪತಿ ಅನುಮಾನಗೊಂಡಿದ್ದಾನೆ. ಪದೇ ಪದೇ ಓರಲ್ ಸೆಕ್ಸ್ ಗೆ ಪತ್ನಿ ಒತ್ತಾಯ ಮಾಡಿದ್ದರಿಂದ ಅನುಮಾನ ಹೆಚ್ಚಾಗಿದೆ. ತಕ್ಷಣ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾನೆ.
ಪರೀಕ್ಷಿಸಿದ ವೈದ್ಯರು, ಖಾಸಗಿ ಅಂಗದಲ್ಲಿ ವಿಷವಿದೆ ಎಂದಿದ್ದಾರೆ. ವಿಷ ಮಹಿಳೆ ದೇಹವನ್ನೂ ಆವರಿಸಿತ್ತು ಎನ್ನಲಾಗಿದೆ. ಪತಿ ಹತ್ಯೆಗೆ ಮುಂದಾಗಿದ್ದ ಪತ್ನಿಯೇ ಕೆಲ ಸಮಯ ಕಳೆದಿದ್ದರೆ ಸಾವನ್ನಪ್ಪುತ್ತಿದ್ದಳು ಎಂದು ವೈದ್ಯರು ಹೇಳಿದ್ದಾರೆ. ಪತಿ ಹತ್ಯೆಗೆ ಪತ್ನಿ ಮಾಡಿದ್ದ ಪ್ಲಾನ್ ಕೇಳಿ ಪೊಲೀಸರೇ ದಂಗಾಗಿದ್ದಾರೆ. ಪತಿ ವಿಚ್ಛೇದನ ನೀಡಲು ಒಪ್ಪಿರಲಿಲ್ಲ. ಹಾಗಾಗಿ ಹತ್ಯೆಗೆ ಯತ್ನಿಸಿದ್ದೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ.