alex Certify ಬಹುನಿರೀಕ್ಷಿತ 2021ರ ರಾಯಲ್​ ಎನ್​ಫೀಲ್ಡ್​​ ಕ್ಲಾಸಿಕ್​ 350 ಬಿಡುಗಡೆಗೆ ಮುಹೂರ್ತ ಫಿಕ್ಸ್…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುನಿರೀಕ್ಷಿತ 2021ರ ರಾಯಲ್​ ಎನ್​ಫೀಲ್ಡ್​​ ಕ್ಲಾಸಿಕ್​ 350 ಬಿಡುಗಡೆಗೆ ಮುಹೂರ್ತ ಫಿಕ್ಸ್…..!

ಭಾರತದಲ್ಲಿ ರಾಯಲ್​ ಎನ್​ಫೀಲ್ಡ್​​ ನ್ಯೂ ಕ್ಲಾಸಿಕ್​ 350 ಅನಾವರಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ರಾಯಲ್​ ಎನ್​ಫೀಲ್ಡ್​ ಕಂಪನಿಯು ಬಹುನಿರೀಕ್ಷಿತ ಕ್ಲಾಸಿಕ್​ 350ಯನ್ನು ಸೆಪ್ಟೆಂಬರ್​ 1ರಂದು ಬಿಡುಗಡೆ ಮಾಡುವುದಾಗಿ ಟ್ವಿಟರ್​ನಲ್ಲಿ ಪರೋಕ್ಷ ಮಾಹಿತಿ ನೀಡಿದೆ. ಆದರೆ ಈ ದಿನಾಂಕದಂದೇ ಕಂಪನಿಯು ಬೈಕ್​ ಬಿಡುಗಡೆ ಮಾಡುತ್ತದೆಯೇ ಅನ್ನೋದಕ್ಕೆ ಅಧಿಕೃತ ಮಾಹಿತಿ ಇನ್ನೂ ತಿಳಿದಿಲ್ಲ. ಕ್ಲಾಸಿಕ್​ 350ರ ದರವನ್ನು ಕಂಪನಿಯು ಸೆಪ್ಟಂಬರ್​ 1ರಂದೇ ಘೋಷಿಸಲಿದೆ ಎನ್ನಲಾಗಿದೆ.

ಕ್ಲಾಸಿಕ್​ 350ಗೆ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ಹೊಸ ಮಾದರಿಯ ಕ್ಲಾಸಿಕ್​​ 350ರಲ್ಲಿ ಕಂಪನಿಯು ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಟಿವಿಸಿ ಚಿತ್ರೀಕರಣದ ವೇಳೆ 2021ರ ಮಾದರಿಯ ಕ್ಲಾಸಿಕ್​ 350ಯ ಸ್ಪೈ ಚಿತ್ರಗಳು ಬಹಿರಂಗವಾಗಿದ್ದವು. ಇದರ ಪ್ರಕಾರ ಹಳೆಯ ಮಾದರಿಯ ವಿನ್ಯಾಸ ತೀರಾ ವಿಭಿನ್ನ ರೂಪವನ್ನು ಈ ಬೈಕ್​ ಹೊಂದಿಲ್ಲ ಎಂದು ಅಂದಾಜಿಸಬಹುದಾಗಿದೆ. ಆದರೆ ಹೊಸ ಮಾದರಿಯ ಕ್ಲಾಸಿಕ್​ 350 ಸಿಂಗಲ್​ ಸೀಟ್​, ವೈರ್​​ಸ್ಪೋಕ್​ ವ್ಹೀಲ್ಸ್​, ಟ್ರಿಪ್ಪರ್​ ನ್ಯಾವಿಗೇಷನ್​, ಹಿಂಭಾಗದ ರೇರ್​ ಮಿರರ್ಸ್​, ವೃತ್ತಾಕಾರದ ಹೆಡ್​ ಲ್ಯಾಂಪ್​ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

ಹೊಸ ಮಾದರಿಯ ರಾಯಲ್​ ಎನ್​ಫೀಲ್ಡ್​ ಕ್ಲಾಸಿಕ್​ 350ಯು ಹಳೆಯ ಮಾದರಿಯ ಎಂಜಿನ್​ನ್ನೇ ಹೊಂದಿರಲಿದೆ. 349 ಸಿಸಿ ಏರ್​ ಕೂಲ್ಡ್​, ಸಿಂಗಲ್​ ಸಿಲಿಂಡರ್​ ಮೋಟಾರ್​​ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಹೊಂದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...