ಅಮೆರಿಕಾದ ನಾಸಾ ಸಂಸ್ಥೆಯ ಬಗ್ಗೆ ಕೇಳಿರುತ್ತೀರಿ. ಜನರು ನಂಬಲಾಗದಂತಹ ಚಿತ್ರಗಳನ್ನು ಈ ಸಾಮಾನ್ಯವಾಗಿ ನಾಸಾ ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ನಮ್ಮ ನೆರೆಯ ಗ್ರಹಗಳ ಚಿತ್ರಗಳಿಂದ ಹಿಡಿದು ದೂರದ ಗ್ಯಾಲಕ್ಸಿಗಳ ವಿಭಿನ್ನ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಸದ್ಯ ಈ ಪಟ್ಟಿಗೆ ಹೊಸತೊಂದು ದೃಶ್ಯ ಸೇರ್ಪಡೆಯಾಗಿದ್ದು, ‘ನಿಮ್ಮ ದಿನವನ್ನು ಬೆಳಗಿಸಲು ಒಂದು ಸಿಹಿ ಕಾಸ್ಮಿಕ್ ಗುಲಾಬಿ’ ಅಂತಾ ಶೀರ್ಷಿಕೆ ನೀಡಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಪರಸ್ಪರ ಎರಡು ನಕ್ಷತ್ರಪುಂಜಗಳು ಗುಲಾಬಿ ರೀತಿಯಲ್ಲಿರುವ ಸುಂದರ ದೃಶ್ಯವನ್ನು ಕಾಣಬಹುದು.
ಗೂಟದ ಕಾರಿನ ಆಸೆಯಿಂದ ಸಿದ್ದರಾಮಯ್ಯ ಹೀಗೆಲ್ಲ ಮಾಡಿಬಿಟ್ರು….! ಸದಾನಂದ ಗೌಡ ಹೊಸ ಬಾಂಬ್
ಆರ್ಪ್ 273 ಗುಲಾಬಿಯನ್ನು ಹೋಲುವ ಅದ್ಭುತವಾದ ಗ್ಯಾಲಕ್ಸಿಯ ಮೇರುಕೃತಿಯನ್ನು ರೂಪಿಸುತ್ತದೆ. ಈ ನಕ್ಷತ್ರಪುಂಜಗಳು ಆಂಡ್ರೊಮಿಡಾ ನಕ್ಷತ್ರಪುಂಜದಲ್ಲಿ ಸುಮಾರು 300 ಮಿಲಿಯನ್ ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದೆ. ಈ ಅದ್ಭುತ ದೃಶ್ಯವನ್ನು ಹಬಲ್ ಬಾಹ್ಯಾಕಾಶ ದೂರದರ್ಶಕದಿಂದ ಸೆರೆಹಿಡಿಯಲಾಗಿದೆ. ಸದ್ಯ ಈ ಬಾಹ್ಯಾಕಾಶದ ನಕ್ಷತ್ರಪುಂಜದ ಸುಂದರ ದೃಶ್ಯದ ವಿಡಿಯೋ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ವ್ಹಾವ್ ಎಂದು ಉದ್ಘರಿಸಿದ್ದಾರೆ.
https://www.youtube.com/watch?v=jX7oFzrdt4Y