ಅಫ್ಘಾನಿಸ್ಥಾನ ತಾಲಿಬಾನ್ ಕೈ ವಶವಾದ ಬಳಿಕ ಅಲ್ಲಿನ ಪರಿಸ್ಥಿತಿ ನರಕಸದೃಶ್ಯವಾಗಿದೆ. ಅಪ್ಘಾನಿಸ್ತಾನ ಪ್ರಜೆಗಳು ಮಾತ್ರವಲ್ಲದೆ ಅಲ್ಲಿರುವ ವಿದೇಶಿಯರೂ ಕೂಡಾ ಆತಂಕದಲ್ಲಿದ್ದಾರೆ. ಸುರಕ್ಷಿತವಾಗಿ ದೇಶ ತೊರೆದರೆ ಸಾಕೆಂದು ಹಾತೊರೆಯುತ್ತಿದ್ದಾರೆ.
ಈಗಾಗಲೇ ಐಎಂಎಫ್ ಅಫ್ಘಾನಿಸ್ತಾನಕ್ಕೆ ಹಣಕಾಸಿನ ಸಹಾಯ ಸ್ಥಗಿತಗೊಳಿಸಿದ್ದು, ಈಗ ವಿಶ್ವ ಬ್ಯಾಂಕ್ ಸಹ ಇದೇ ಹಾದಿ ಹಿಡಿದಿದೆ. ಅಫ್ಘಾನಿಸ್ಥಾನಕ್ಕೆ ಹಣಕಾಸು ನೆರವು ಸ್ಥಗಿತಗೊಳಿಸಿರುವುದಾಗಿ ವಿಶ್ವ ಬ್ಯಾಂಕ್ ತಿಳಿಸಿದೆ.
ಅಫ್ಘಾನಿಸ್ಥಾನದ ಹಣ ಅಮೆರಿಕಾ ಬ್ಯಾಂಕ್ ಗಳಲ್ಲಿ ಜಫ್ತಿಯಾಗಿದ್ದು, ತಾಲಿಬಾನಿಗಳು ಆಡಳಿತ ಹಿಡಿದರೂ ಸಹ ಹಣವಿಲ್ಲದೆ ಪರಿತಪಿಸುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ತಾಲಿಬಾನಿಗಳ ಕ್ರೌರ್ಯ ಮೇರೆ ಮೀರಬಹುದು ಎಂದು ಹೇಳಲಾಗುತ್ತಿದೆ.