ದೊಡ್ಡ ವಿವಾಹ ಸಮಾರಂಭ, ಬಹಳ ಜನ ಸೇರಿದ್ದಾರೆ. ವರ ಕೂಡ ಮಂಟಪಕ್ಕೆ ಬಂದು, ವಧುವಿನ ಬರುವಿಕೆ ಕಾಯುತ್ತಿದ್ದಾನೆ. ಆದ್ರೆ, ಮಂಟಪದ ಪ್ರವೇಶದವರೆಗೆ ಬಂದ ವಧುವು ಮುಂದೆ ಹೆಜ್ಜೆಯೇ ಇಡುತ್ತಿಲ್ಲ. ಕಾರಣ, ತಾನು ಆಯ್ಕೆ ಮಾಡಿ ಕಾಯ್ದಿರಿಸಿದ್ದ ಹಿಟ್ ಗೀತೆಯೊಂದನ್ನು ಡಿಜೆ ಪ್ಲೇ ಮಾಡುತ್ತಿಲ್ಲ. ಬದಲಿಗೆ ಬೇರೆಯದ್ದೇ ಗೀತೆ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ.
ಇಂಥದ್ದೊಂದು ಘಟನೆ ನಿಜವಾಗಿಯೂ ನಡೆದಿದ್ದು, ವಿಡಿಯೊವನ್ನು ದಿ ವೆಡ್ಡಿಂಗ್ ಬ್ರಿಗೇಡ್ ಇನ್‍ಸ್ಟ್ರಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವಿಷಾಹಾರ ಸೇವನೆಯಿಂದ 100 ಕ್ಕೂ ಅಧಿಕ ಮಂದಿ ಅಸ್ವಸ್ಥ
‘ನನಗೆ ಪಿಯಾ ಮೊಹೆ ಘರ್ ಆಯೆ’ ಗೀತೆಯೇ ಬೇಕು ಎಂದು ಹೇಳಿದ್ದೆ’ ಎಂದು ಕೂಗುತ್ತಿರುವ ವಧುವಿನ ಒತ್ತಾಯಕ್ಕೆ ಕೊನೆಗೂ ಮಣಿಯಲಾಗಿದೆ. ಆಕೆಯ ನೆಚ್ಚಿನ ಗೀತೆ ಪ್ಲೇ ಆದ ಮೇಲೆಯೇ ವಿವಾಹ ಮಂಟಪ ಏರಿ ಶುಭಕಾರ್ಯ ಪೂರ್ಣಗೊಂಡಿದೆ.
https://www.youtube.com/watch?v=T9h8PFzpyM8