alex Certify ಕೊರೊನಾ 3 ನೇ ಅಲೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಯಿಂದ ಈ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ 3 ನೇ ಅಲೆ ಕುರಿತು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಯಿಂದ ಈ ಹೇಳಿಕೆ

ಕೋವಿಡ್ ಮೂರನೇ ಅಲೆಯ ಬಗ್ಗೆ ಮಾಧ್ಯಮಗಳು ಜನರಲ್ಲಿ ಅದಾಗಲೇ ಜಾಗೃತಿ ಮೂಡಿಸುತ್ತಿದ್ದು, ಎಚ್ಚರದಿಂದ ಇರುವಂತೆ ತಿಳಿ ಹೇಳುತ್ತಿವೆ.

ಇದೇ ವೇಳೆ, ಸೋಂಕಿನ ಬಗ್ಗೆ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್, “ಕೋವಿಡ್ ಮೂರನೇ ಅಲೆ ನಮ್ಮ ಮೇಲೆ ಯಾವಾಗ ಅಪ್ಪಳಿಸಲಿದೆ ಹಾಗೂ ಯಾವಾಗ ಅಪ್ಪಳಿಸಲಿದೆ ಎಂದು ಊಹಿಸುವುದು ಅಸಾಧ್ಯ. ಆದರೆ ಸೋಂಕು ಹಬ್ಬುವ ಸಾಧ್ಯತೆಗಳ ಮೇಲೆ ಪ್ರಭಾವ ಬೀರಬಲ್ಲ ಅಂಶಗಳ ಮೇಲೆ ನೀವು ಶಿಕ್ಷಿತವಾದ ಊಹೆಗಳನ್ನು ಮಾಡಬಹುದು” ಎಂದು ತಿಳಿಸಿದ್ದಾರೆ.

ಕೃಷಿ ಆದಾಯದ ಮೇಲೆ ಇದೆಯಾ ತೆರಿಗೆ….? ನಿಮಗೆ ತಿಳಿದಿರಲಿ ಈ ಮಾಹಿತಿ

“ಕೋವಿಡ್ ಸೋಂಕು ಸಾಂಕ್ರಮಿಕದ ಸ್ಥಿತಿ ತಲುಪುವ ಸಾಧ್ಯತೆ ಇದ್ದು, ಈ ವೈರಸ್‌ನೊಂದಿಗೆ ಬದುಕುವುದಕ್ಕೆ ಜನತೆ ಹೊಂದಿಕೊಳ್ಳಬೇಕಿದೆ” ಎನ್ನುವ ಸೌಮ್ಯ, ಭಾರತದ ಕೋವ್ಯಾಕ್ಸಿನ್‌ ಲಸಿಕೆಗೆ ಸೆಪ್ಟೆಂಬರ್‌ ಮಧ್ಯಭಾಗದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಮೂಹವು ಮಾನ್ಯತೆ ನೀಡುವ ಭರವಸೆ ಇದೆ ಎಂದಿದ್ದಾರೆ.

“ಭಾರತದ ವಿಚಾರಕ್ಕೆ ಬರೋದಾದರೆ, ದೇಶದ ಜನಸಂಖ್ಯೆಯ ಗಾತ್ರ ಹಾಗೂ ವಿವಿಧ ಭಾಗಗಳಲ್ಲಿರುವ ಬದಲಾದ ಭೌಗೋಳಿಕ ಪರಿಸ್ಥಿತಿಗಳ ಕಾರಣದಿಂದಾಗಿ ಜನರ ರೋಗ ನಿರೋಧಕ ಶಕ್ತಿಗಳಲ್ಲಿ ವ್ಯತ್ಯಾಸ ಇರುತ್ತದೆ. ಹೀಗಾಗಿ ದೇಶದ ಅನೇಕ ಭಾಗಗಳಲ್ಲಿ ಕೋವಿಡ್ ಪರಿಸ್ಥಿಯು ಏರಿಳಿತಗಳನ್ನು ಕಾಣುವ ಸಾಧ್ಯತೆಗಳು ಬಹಳಷ್ಟಿವೆ. ಹೀಗಾಗಿ ಎರಡನೇ ಅಲೆ ವೇಳೆ ಹೆಚ್ಚು ಬಾಧಿತವಾಗದ ಹಾಗೂ ಲಸಿಕಾ ಕಾರ್ಯಕ್ರಮ ಅಷ್ಟಾಗಿ ಕೈಗೊಳ್ಳದೇ ಇರುವ ಪ್ರದೇಶಗಳಲ್ಲಿ ಮುಂದಿನ ಕೆಲ ತಿಂಗಳುಗಳಲ್ಲಿ ಏರಿಳಿತಗಳ ಸಾಧ್ಯತೆ ಇರುತ್ತದೆ” ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂಥ ಹೇಳಿಕೆಯನ್ನು ಸೋಂಕಿನ ಮೂರನೇ ಅಲೆ ಕುರಿತಂತೆ ನೀಡಿದ್ದಾರೆ ವಿಜ್ಞಾನಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...