ಚಂಡೀಗಢ: ದೆಹಲಿಯ ಏಮ್ಸ್ ನಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ನನ್ನು ಭೇಟಿಯಾಗಲು ಅನಧಿಕೃತ ಸಂದರ್ಶಕರಿಗೆ ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಡಿಎಸ್ಪಿಯನ್ನು ಅಮಾನತುಗೊಳಿಸಲಾಗಿದೆ.
ಡಿಎಸ್ಪಿ ಶಂಶೇರ್ ಸಿಂಗ್ ರನ್ನು ಹರಿಯಾಣ ಸರಕಾರ ಅಮಾನತುಗೊಳಿಸಿ ಆದೇಶಿಸಿದೆ.
ಗುರ್ಮಿತ್ ರಾಮ್ ರಹೀಮ್ ಅವರನ್ನು ಜುಲೈ 13ರಂದು ವೈದ್ಯಕೀಯ ಪರೀಕ್ಷೆಗಾಗಿ ದೆಹಲಿಯ ಏಮ್ಸ್ ಗೆ ಕರೆದೊಯ್ಯಲಾಗಿತ್ತು. ಡಿಎಸ್ಪಿ ಸಿಂಗ್ ಅವರು ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದರು. ವರದಿಗಳ ಪ್ರಕಾರ ನಾಲ್ಕು ಜನರಿಗೆ ಇವರು ಅನಧಿಕೃತವಾಗಿ ಪ್ರವೇಶ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
BIG BREAKING: ನಿರೀಕ್ಷಣಾ ಜಾಮೀನು ಅರ್ಜಿ ವಜಾ; ಕೇಂದ್ರ ಸಚಿವ ನಾರಾಯಣ ರಾಣೆ ಬಂಧನ ಸಾಧ್ಯತೆ
ಅಮಾನತು ಆದೇಶವನ್ನು ಹೇಳಿದ ಹರಿಯಾಣದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಅರೋರಾ, “ಹರಿಯಾಣದ ರಾಜ್ಯಪಾಲರು ಡಿಎಸ್ಪಿ ಶಂಶೇರ್ ಸಿಂಗ್ ಅವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಅಮಾನತು ಅವಧಿಯಲ್ಲಿ ಹರಿಯಾಣ ನಾಗರಿಕ ಸೇವೆಗಳ (ಸಾಮಾನ್ಯ) ನಿಯಮಗಳು-2016ರ ನಿಯಮ 83ರ ಅಡಿಯಲ್ಲಿ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ” ಎಂದು ತಿಳಿಸಿದ್ದಾರೆ.