ಮೈಸೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಬಗ್ಗೆ ಎಂ ಎಲ್ ಸಿ ಹೆಚ್.ವಿಶ್ವನಾಥ್ ನೀಡಿದ್ದ ತಿರುಗೇಟಿಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಪ್ರಧಾನಿ ಮೋದಿ ಸರ್ಕಾರ ಹಣ ಬಿಡುಗಡೆ ಮಾಡಿ ಚಾಲನೆ ನೀಡಿದ್ದು, 8666 ಕೋಟಿ ರೂ. ಪ್ರಾಜೆಕ್ಟ್ ನಲ್ಲಿ 8 ಪೈಸೆನಾದ್ರೂ ವಿಶ್ವನಾಥ್ ಬಿಡುಗಡೆ ಮಾಡಿಸಿದ್ರಾ? ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ಹೆಚ್.ವಿಶ್ವನಾಥ್ ಟೀಕಿಸದ ವ್ಯಕ್ತಿಗಳೇ ಇಲ್ಲ, ಟ್ರಂಪ್, ಬೈಡನ್, ದೇವೇಗೌಡ, ಯಡಿಯೂರಪ್ಪ, ವಿಜಯೇಂದ್ರ, ಸೋಮಶೇಖರ್ ಎಲ್ಲರನ್ನೂ ಬೈದಿದ್ದಾಯ್ತು, ಸಿಎಂ ಬೊಮ್ಮಾಯಿ ವಿರುದ್ಧ ಮಾತ್ರ ಮಾತನಾಡಲು ಏನೂ ಸಿಕ್ಕಿಲ್ಲ. ಈ ಗ್ಯಾಪ್ ನಲ್ಲಿ ನನ್ನ ಬಗ್ಗೆ ಟೀಕೆ ಮಾಡುತ್ತಿದ್ದಾರೆ ಎಂದರು.
‘ಮಾತಾಡ್ ಮಾತಾಡು ಮಲ್ಲಿಗೆ’ ತೆರೆಮೇಲೆ ಬಂದು ಇಂದಿಗೆ 14 ವರ್ಷ
ನಿತಿನ್ ಗಡ್ಕರಿ, ಪ್ರಧಾನಿ ಮೋದಿ ಅವರ ಆಡಳಿತದಲ್ಲಿ ಶುರುವಾಗಿರುವ ಯೋಜನೆ ಕ್ರೆಡಿಟ್ ಮೋದಿ ಸರ್ಕಾರಕ್ಕೆ ಸಲ್ಲಬೇಕು. ವಿಶ್ವನಾಥ್ ತಾವು ಯೋಜನೆ ತಂದಿದ್ದರೆ ಚುನಾವಣೆ ವೇಳೆ ಯಾಕೆ ಹೇಳಿಲ್ಲ? ಇನ್ನು ಉಂಡುವಾಡಿ ಕುಡಿಯುವ ನೀರಿನ ಬಗ್ಗೆಯೂ ವಿಶ್ವನಾಥ್ ನಯಾಪೈಸೆ ನೀಡಿಲ್ಲ. ಮಾಜಿ ಸಚಿವ ಮಹದೇವಪ್ಪ ಅವಧಿಯಲ್ಲಿ ಮಾಡಿದ ಒಂದೇ ಒಂದು ರಸ್ತೆ ಕೂಡ ನೆಟ್ಟಗಿಲ್ಲ ಹೀಗಿರುವಾಗ ದಶಪಥ ರಸ್ತೆ ಕ್ರೆಡಿಟ್ ಬೇಕಾ? ಹಿರಿಯರಾದವರು ಮಾರ್ಗದರ್ಶನ ಮಾಡಬೇಕು ಹೊರತು ಬೀದಿ ಜಗಳಕ್ಕೆ ಇಳಿಯುವುದಲ್ಲ. ಈ ಯೋಜನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದಾರೆ.