ಚಿಂಪಾಂಜಿ ಜೊತೆ ತಾನು ಸಂಬಂಧ ಹೊಂದಿದ್ದೇನೆ ಎಂದು ಮಹಿಳೆ ಹೇಳಿಕೊಂಡ ಬಳಿಕ ಶಾಕ್ ಆದ ಮೃಗಾಲಯ ಸಿಬ್ಬಂದಿ ಆಕೆಯನ್ನು ಮೃಗಾಲಯದಿಂದ ಬ್ಯಾನ್ ಮಾಡಿದ ವಿಚಿತ್ರ ಘಟನೆಯು ಬೆಲ್ಜಿಯಂನಲ್ಲಿ ನಡೆದಿದೆ.
ತನ್ನನ್ನು ತಾನು ಪ್ರಾಣಿ ಪ್ರಿಯೆ ಎಂದು ಹೇಳಿಕೊಂಡಿದ್ದ ಮಹಿಳೆಯು ಆ್ಯಂಟ್ವರ್ಪ್ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದಳು. ಆದರೆ ಈಕೆ ಚೀತಾ ಎಂಬ ಹೆಸರಿನ ಚಿಂಪಾಂಜಿಯೊಂದರ ಜೊತೆಗೆ ಅತೀ ಹೆಚ್ಚು ಸಮಯ ಕಳೆಯುತ್ತಿದ್ದಳು.
ವಾರಕ್ಕೆ ಒಂದು ಬಾರಿ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದ ಈಕೆ ಇದೊಂದೇ ಚಿಂಪಾಂಜಿ ಜೊತೆ ಅತಿಯಾಗಿ ಸಮಯ ಕಳೆಯುತ್ತಿದ್ದುದ್ದನ್ನು ಮೃಗಾಲಯ ಸಿಬ್ಬಂದಿ ಗಮನಿಸಿದ್ದಾರೆ.
ಮಾನವೀಯತೆಗೆ ಇಲ್ಲಿದೆ ಉದಾಹರಣೆ: ವೃದ್ಧ ರೋಗಿಗಳೊಂದಿಗೆ ವಾರಾಂತ್ಯ ಕಳೆಯುವ ನರ್ಸ್
ಈ ಬಗ್ಗೆ ಮಹಿಳೆಯ ಬಳಿ ವಿಚಾರಿಸಿದ ವೇಳೆ ಆಕೆ ತಾನು 38 ವರ್ಷದ ಚಿಂಪಾಂಜಿಯ ಜೊತೆ ಸಂಬಂಧ ಹೊಂದಿರೋದಾಗಿ ಹೇಳಿದ್ದಾಳೆ.
ವರದಿಯ ಪ್ರಕಾರ ಆ್ಯಡಿ ಟಿಮ್ಮರ್ಮನ್ಸ್ ಪ್ರತಿ ವಾರ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದರು. ಗಾಜಿನ ತಡೆಗೋಡೆಯಿಂದಲೇ ಈಕೆ ಚಿಂಪಾಂಜಿ ಜೊತೆ ಸಂವಹನ ನಡೆಸುತ್ತಿದ್ದರು. ಹಾಗೂ ಪರಸ್ಪರ ಒಬ್ಬರಿಗೊಬ್ಬರು ಚುಂಬಿಸಿಕೊಳ್ತಿದ್ದರು ಎನ್ನಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದ ಮಹಿಳೆ ಮೇಲೆ ಕ್ರಮ ಕೈಗೊಳ್ಳಲು ಮೃಗಾಲಯ ಸಿಬ್ಬಂದಿ ನಿರ್ಧರಿಸಿದ್ದಾರೆ. ಹೀಗಾಗಿ ಈಕೆಗೆ ಮೃಗಾಲಯ ಭೇಟಿಗೆ ನಿರ್ಬಂಧ ಹೇರಲಾಗಿದೆ. ಈ ರೀತಿಯ ಸಂಬಂಧ ಒಳ್ಳೆಯದಲ್ಲ ಎಂದು ನಿರ್ಧರಿಸಿ ಮೃಗಾಲಯ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.