
ರಾಜಸ್ಥಾನದ ಜೋಧಪುರದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕರು, 12 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದರು. ಆಕೆ ಸದ್ಯ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ರಾಜಸ್ಥಾನ ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.
ಬಾಲೆಸಾರ್ ಉಪವಿಭಾಗದಲ್ಲಿ ಈ ಘಟನೆ ನಡೆದಿದೆ. ಹೊಟ್ಟೆ ನೋವು ಎಂದು ಒದ್ದಾಡುತ್ತಿದ್ದ ಬಾಲಕಿಯನ್ನು ತಿಂಗಳ ಹಿಂದೆ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಗ ಆಕೆ ಗರ್ಭಿಣಿ ಎಂದು ತಿಳಿದಿತ್ತು.
ಅತ್ಯಾಚಾರ ಘಟನೆಯನ್ನು ಬಾಲಕಿ ವಿವರಿಸಿದ ಬಳಿಕ, ಪೋಷಕರು ಗರ್ಭಪಾತಕ್ಕೆ ಒತ್ತಾಯಿಸಿದರು. ಆದರೆ , ಬಾಲಕಿಯ ಪ್ರಾಣಕ್ಕೆ ಕುತ್ತಾಗುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಸಿದಾಗ, ಪೋಷಕರು ಗರ್ಭಪಾತ ಮಾಡಿಸುವ ನಿರ್ಧಾರದಿಂದ ಹಿಂದೆ ಸರಿದರು.
BIG BREAKING NEWS: ಡ್ರಗ್ಸ್ ಕೇಸಲ್ಲಿ ಖ್ಯಾತ ನಟಿಯರಿಗೆ ಬಿಗ್ ಶಾಕ್ – ಬಯಲಾಯ್ತು ರಾಗಿಣಿ, ಸಂಜನಾ ಅಸಲಿಯತ್ತು
ಬಾಲಕಿಯು ತನ್ನ ಮೇಲೆ ಎರಗಿದ ಕಾಮುಕರ ಗುರುತು ಮತ್ತು ಹೆಸರು ಹೇಳಿದ್ದು, ಪೊಲೀಸರು ಮತ್ತು ರಾಜಸ್ಥಾನ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧಿಕಾರಿಗಳು ಅಪ್ರಾಪ್ತ ಬಾಲಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.