ಕೃಷ್ಣ ಜನ್ಮಾಷ್ಟಮಿಯನ್ನು ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಭಕ್ತರು, ಭಯ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡುತ್ತಾರೆ.
ಹಿಂದೂ ಪುರಾಣದ ಪ್ರಕಾರ, ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಈ ವರ್ಷ, ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಆಗಸ್ಟ್ 30 ರ ಸೋಮವಾರ ಆಚರಿಸಲಾಗುತ್ತದೆ.
ಆಗಸ್ಟ್ 29 ರಂದು ರಾತ್ರಿ 11.25 ಕ್ಕೆ ಅಷ್ಟಮಿ ತಿಥಿ ಆರಂಭವಾಗಲಿದೆ. ಇದು ಆಗಸ್ಟ್ 30 ರ ಮಧ್ಯಾಹ್ನ 1.59 ರವರೆಗೆ ಇರಲಿದೆ. ಆಗಸ್ಟ್ 30 ರ ರಾತ್ರಿ 11.59 ರಿಂದ 12.44 ರವರೆಗೆ ಕೃಷ್ಣನ ಪೂಜೆಗೆ ಶುಭ ಮುಹೂರ್ತವಿದೆ. ರೋಹಿಣಿ ನಕ್ಷತ್ರವು ಆಗಸ್ಟ್ 30 ರಂದು ಬೆಳಿಗ್ಗೆ 06.39 ಕ್ಕೆ ಆರಂಭವಾಗಲಿದ್ದು, ಆಗಸ್ಟ್ 31ರಂದು ಬೆಳಿಗ್ಗೆ 9.44 ಕ್ಕೆ ಕೊನೆಗೊಳ್ಳಲಿದೆ.
ಮೊದಲು ಕೃಷ್ಣನಿಗೆ ಹಾಲಿನ ಅಭಿಷೇಕ ಮಾಡಬೇಕು. ನಂತರ ಮೊಸರು, ತುಪ್ಪ, ಜೇನುತುಪ್ಪದಿಂದ ಅಭಿಷೇಕ ಮಾಡಬೇಕು. ನಂತ್ರ ಗಂಗಾಜಲದಲ್ಲಿ ಅಭಿಷೇಕ ಮಾಡಬೇಕು. ಪಂಚಾಮೃತದ ಅಭಿಷೇಕ ಮಾಡಿ ನಂತ್ರ ಬಾಲ ಗೋಪಾಲನನ್ನು ಅಲಂಕರಿಸಬೇಕು.
ಕೃಷ್ಣನ ಭಜನೆಗಳನ್ನು ಹಾಡಿ, ಶ್ರೀಗಂಧ ಮತ್ತು ಅಕ್ಷತೆಯೊಂದಿಗೆ ತಿಲಕವನ್ನು ಇಡಬೇಕು. ಧೂಪ, ದೀಪ ಹಾಕಿ, ಬೆಣ್ಣೆ, ಜೇನುತುಪ್ಪ ತುಳಸಿ ಎಲೆಗಳನ್ನು ಅರ್ಪಿಸಬೇಕು. ಹಾಗೆ ಸಿಹಿ ತಿನಿಸುಗಳನ್ನು ಅರ್ಪಿಸಿ, ಪೂಜೆ ಮಾಡಬೇಕು.