ಭಾರತದಲ್ಲಿ ಪ್ರತಿಯೊಂದು ಕಾರ್ಯಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಎಂಬಂತೆ ಆಗಿದೆ. ತೆರಿಗೆ ಪಾವತಿಯಿಂದ ಹಿಡಿದು ಪಾನ್ ಕಾರ್ಡ್ಗೆ ಆಧಾರ್ ಲಿಂಕ್ ಮಾಡುವವರೆಗೂ ಇದರ ಬಳಕೆಯಾಗುತ್ತಿದೆ.
12 ಸಂಖ್ಯೆಯ ಬಯೋಮೆಟ್ರಿಕ್ ನಂಬರ್ಗೆ ಇಷ್ಟೆಲ್ಲ ಪ್ರಾಮುಖ್ಯತೆ ಇದೆ. ಆದರೆ ಇದರಲ್ಲಿ ನಕಲಿ ಕಾರ್ಡ್ಗಳನ್ನು ಹೊಂದಿರುವವರೂ ಇದ್ದಾರೆ. ಈ ನಕಲಿ ಆಧಾರ್ ಕಾರ್ಡ್ಗಳನ್ನು ಬಳಸಿ ನಿಮ್ಮನ್ನು ವಂಚನೆ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಆಧಾರ್ ಕಾರ್ಡ್ ಅಸಲಿಯತ್ತನ್ನು ತಿಳಿದುಕೊಳ್ಳಲು ಏನು ಮಾಡಬೇಕು ಅನ್ನೋದಕ್ಕೆ ಇಲ್ಲಿದೆ ಮಾಹಿತಿ :
1. ಯುಐಡಿಎಐ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
2. ಆಧಾರ್ ಸರ್ವೀಸ್ನಲ್ಲಿ ಆಯ್ಕೆಗೆ ಹೋಗಿ.
3. Verify an Aadhaar number ಆಯ್ಕೆ ಮೇಲೆ ಕ್ಲಿಕ್ ಮಾಡಿ.
4. ಆಧಾರ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ನ್ನು ಹಾಕಿ
5. proceed to verify ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಒಂದು ವೇಳೆ ನೀವು ಒದಗಿಸಿದ ಆಧಾರ್ ಸಂಖ್ಯೆಯು ಸರಿಯಾಗಿದ್ದಲ್ಲಿ ನಿಮಗೆ ಆಧಾರ್ ವೆರಿಫಿಕೇಷನ್ ಕಂಪ್ಲೀಟೆಡ್ ಎಂದು ಪರದೆ ಮೇಲೆ ಗೋಚರವಾಗಲಿದೆ. ಇಲ್ಲವಾದಲ್ಲಿ ಆಧಾರ್ ನಂಬರ್ ಈಸ್ ನಾಟ್ ಡಿಟೆಕ್ಟೆಡ್ ಎಂದು ಪರದೆ ಮೇಲೆ ಕಾಣಲಿದೆ.