ಗ್ರಾಹಕರ ಬಾಯಿರುಚಿಗೆ ತಕ್ಕಂತೆ ಪಿಜ್ಝಾ ಟಾಪಿಂಗ್‌ಗಳನ್ನು ಹಾಕುವುದು ಸರ್ವೇ ಸಾಮಾನ್ಯ.
ಡೊಮಿನೋಸ್ ಪಿಜ್ಝಾದ ಗ್ರಾಹಕರೊಬ್ಬರು ತಮಗೆ ಡೆಲಿವರಿ ಮಾಡಿದ ಪಿಜ್ಝಾದ ಟಾಪಿಂಗ್‌ನಲ್ಲಿ ನಟ್ ಮತ್ತು ಬೋಲ್ಟ್ ಕಂಡು ಶಾಕ್ ಆಗಿದ್ದಾರೆ. ಜುಲೈ 29ರಂದು ಡೊಮಿನೋಸ್ ಔಟ್‌ಲೆಟ್ ಒಂದರಿಂದ ತಾವು ಖರೀದಿ ಮಾಡಿದ ಪಿಜ್ಝಾ ಸವಿಯಲು ಮುಂದಾದ ಮಹಿಳೆಯೊಬ್ಬರಿಗೆ ಅದರ ಹಿಟ್ಟಿನ ಮೇಲೆ ಲೋಹದ ವಸ್ತುಗಳು ಕಾಣಿಸಿವೆ.
ಬ್ರಿಟನ್‌ನ ಥಾರ್ನ್‌ಟನ್ ಕ್ಲೆವೆಸ್‌ನ ಫ್ಲೀಟ್‌ವುಡ್ ರಸ್ತೆಯ ಔಟ್‌ಲೆಟ್‌ನಲ್ಲಿ ಈ ಘಟನೆ ಜರುಗಿದೆ. ಕೂಡಲೇ ಔಟ್‌ಲೆಟ್‌ಗೆ ಕರೆ ಮಾಡಿ ದೂರು ನೀಡಿದ ಮಹಿಳೆಗೆ, ಸ್ಟೋರ್‌ನ ಸಿಬ್ಬಂದಿ ಕ್ಷಮೆಯಾಚಿಸಿದ್ದು, ಪಿಜ್ಝಾದ ದುಡ್ಡನ್ನು ಹಿಂದಿರುಗಿಸಿದ್ದಾರೆ.
ನಿಸರ್ಗ ಸೌಂದರ್ಯ ಸವಿಯಲು ರೈಲ್ವೆ ಇಲಾಖೆಯಿಂದ ಟೂರ್ ಪ್ಯಾಕೇಜ್
ಈ ವಿಷಯವನ್ನು ಆನ್ಲೈನ್‌ನಲ್ಲಿ ಶೇರ್ ಮಾಡಿಕೊಂಡ ಮಹಿಳೆ, “ದಯವಿಟ್ಟು ನೀವು ಪಿಜ್ಝಾ ತಿನ್ನುವ ಮೊದಲು ಅದನ್ನು ಎರಡೆರಡು ಬಾರಿ ಪರೀಕ್ಷೆ ಮಾಡಿಕೊಳ್ಳಿ. ಆರೋಗ್ಯದ ಮೇಲೆ ಬಹಳ ಗಂಭೀರವಾದ ಪರಿಣಾಮ ಬೀರಬಲ್ಲ ವಿಚಾರ ಇದಾಗಿದ್ದು, ಡೊಮಿನೋಸ್ ಪಿಜ್ಝಾ ಇದನ್ನು ಇಲ್ಲೇ ಸರಿ ಪಡಿಸಿಕೊಳ್ಳಬೇಕು. ಬೇರೆ ಯಾರಿಗೇ ಆದರೂ ಹೀಗೆ ಆಗಿದ್ದರೆ ನನಗೆ ಇದು ಸರಿ ಅನಿಸುತ್ತಿರಲಿಲ್ಲ” ಎಂದು ಹೇಳಿದ್ದಾರೆ.