ಮಹಿಳೆಯೊಬ್ಬರ ಅರೆಕೊಳೆತ ಶವವೊಂದು ಪಂಜಾಬ್‌ನ ಮೊಹಾಲಿ ಜಿಲ್ಲೆ ಮುಖಾಂತರ ಹಾದು ಹೋಗುವ ಖರಾರ್-ರೋಪರ್ ಹೆದ್ದಾರಿಯಲ್ಲಿ ಬರುವ ಗೋಸ್ಲನ್ ಗ್ರಾಮದಲ್ಲಿ ಪತ್ತೆಯಾಗಿದೆ.
ರೈತರೊಬ್ಬರು ಮನೆಗೆ ಮರಳುತ್ತಿದ್ದ ವೇಳೆ ಈ ದೇಹವನ್ನು ಕಂಡಿದ್ದಾರೆ. ಮೃತ ಮಹಿಳೆಯ ಶವ ಗುರುತು ಹಿಡಿಯಲು ಪೊಲೀಸರು ವಿಫಲರಾಗಿದ್ದಾರೆ. ಮಹಿಳೆಯನ್ನು ಬೇರೆಲ್ಲೋ ಕೊಲೆ ಮಾಡಿ ಆಕೆಯ ದೇಹವನ್ನು ಈ ಜಾಗಕ್ಕೆ ತಂದು ಬಿಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ಫೋಸಿಸ್‌ಗೆ ಸಮನ್ಸ್ ಜಾರಿ ಮಾಡಿದ ವಿತ್ತ ಸಚಿವಾಲಯ
ರೈತ ಲಖ್ವೀರ್ ಸಿಂಗ್‌ಗೆ ಸುತ್ತಲಿನ ಹೊಲಗಳಲ್ಲಿ ಕೊಳೆತ ವಾಸನೆಯೊಂದು ಬಡಿದು, ಯಾವುದೋ ಸತ್ತ ಪ್ರಾಣಿಯದ್ದಿರಬೇಕೆಂದುಕೊಂಡಿದ್ದಾರೆ. ಎಲ್ಲಿಂದ ಬರುತ್ತಿದೆ ಎಂದು ನೋಡಿದಾಗ ಅಲ್ಲೊಂದು ಸತ್ತು ಬಿದ್ದ ಮಹಿಳೆಯ ಶವ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
“ದೇಹವನ್ನು 3-4 ದಿನಗಳ ಹಿಂದೆ ಇಲ್ಲಿ ಬಿಡಲಾಗಿದೆ ಎಂದು ಮೇಲುನೋಟಕ್ಕೆ ಅನಿಸುತ್ತಿದೆ. ದೇಹವನ್ನು ಶವಾಗಾರದಲ್ಲಿ ಇಟ್ಟಿದ್ದು, ಅಕ್ಕಪಕ್ಕದ ಹಳ್ಳಿಗಳಿಂದ ಕಾಣೆಯಾದ ವ್ಯಕ್ತಿಗಳ ಕುರಿತು ಗ್ರಾಮಸ್ಥರು ಹಾಗೂ ಪೊಲೀಸ್ ಠಾಣೆಗಳಿಗೆ ವಿಚಾರ ಮುಟ್ಟಿಸಿದ್ದೇವೆ. ಮರೋಣೋತ್ತರ ಶವ ಪರೀಕ್ಷೆಯಾದ ಬಳಿಕ ಏನಾದರೂ ಹೆಚ್ಚಿನ ಮಾಹಿತಿ ಸಿಗುವುದೇ ಎಂದು ತಿಳಿಯಲು ಯತ್ನಿಸುತ್ತೇವೆ,” ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಸಮೀಪದ ಕುರಳಿ ಪೊಲೀಸ್ ಠಾಣೆಯಲ್ಲಿ ಐಪಿಸಿಯ 302 (ಕೊಲೆ) ಹಾಗೂ 201 (ಸಾಕ್ಷ್ಯ ನಾಶ) ವಿಧಿಗಳ ಅಡಿ ಪ್ರಕರಣ ದಾಖಲಿಸಲಾಗಿದೆ.